alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತೆ ಬಟ್ಟೆ ಬಿಚ್ಚಿ ಮನಸ್ಸಿಗೆ ಬಂದಂತೆ ಥಳಿಸಿ ವಿಡಿಯೋ ಮಾಡಿದ್ರು…!

ಮೊಹಾಲಿಯಲ್ಲಿ ಕೆಲಸ ಮಾಡ್ತಿರುವ ಯುವತಿಗೆ ಆಕೆ ಸ್ನೇಹಿತೆಯರೇ ಥಳಿಸಿದ ಘಟನೆ ನಡೆದಿದೆ. ಸ್ನೇಹಿತೆಯರಿಬ್ಬರು ಇನ್ನೊಬ್ಬ ಯುವಕನ ಜೊತೆ ಸೇರಿ ಪೀಡಿತೆಗೆ ಥಳಿಸಿದ್ದಾರೆ. ನಂತ್ರ ಬಟ್ಟೆ ಹರಿದು ನಗ್ನವಾಗಿ ವಿಡಿಯೋ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಪೀಡಿತೆ ಬಾಯ್ ಫ್ರೆಂಡ್ ಗೂ ಹೊಡೆದಿದ್ದಾರೆ.

ಯುವತಿ ಫೆಬ್ರವರಿಯಿಂದ ಆದರ್ಶ್ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ತನ್ನ ಗೆಳೆಯನ ಜೊತೆ ವಾಸವಾಗಿದ್ದಾಳೆ. ಭಾನುವಾರ ಪೀಡಿತೆ ಮನೆಗೆ ಬಂದ ಸ್ನೇಹಿತೆಯರು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ನಂತ್ರ ಬಟ್ಟೆ ಬಿಚ್ಚಿ ವಿಡಿಯೋ ಮಾಡಲು ಶುರು ಮಾಡಿದ್ದಾರೆ. ತಪ್ಪಿಸಲು ಬಂದ ಗೆಳೆಯನಿಗೂ ಹೊಡೆದಿದ್ದಾರೆ.

ಅಲ್ಲಿಂದ ತಪ್ಪಿಸಿಕೊಂಡು ಬಂದ ಯುವತಿ ರಸ್ತೆಯಲ್ಲಿ ಓಡಲು ಶುರುಮಾಡಿದ್ದಾಳೆ. ಬಟ್ಟೆ ನೀಡುವಂತೆ ಸ್ಥಳೀಯರಲ್ಲಿ ವಿನಂತಿ ಮಾಡಿದ್ದಾಳೆ. ಮಹಿಳೆಯೊಬ್ಬಳು ಆಕೆ ನೆರವಿಗೆ ಧಾವಿಸಿದ್ದಾಳೆ. ಆರೋಪಿ ಸ್ನೇಹಿತೆಯರನ್ನು ಹಿಡಿದಿದ್ದಾಳೆ. ಆದ್ರೆ ವಿಡಿಯೋ ಮಾಡ್ತಿದ್ದ ಯುವಕ ನಾಪತ್ತೆಯಾಗಿದ್ದಾನೆ.

ಒಬ್ಬ ಸ್ನೇಹಿತೆಗೆ ಪೀಡಿತ ಯುವತಿ ಮೇಲೆ ಸಂಶಯವಿತ್ತು ಎನ್ನಲಾಗಿದೆ. ತನ್ನ ಬಾಯ್ ಫ್ರೆಂಡ್ ಜೊತೆ ಪೀಡಿತೆ ಸಂಬಂಧ ಹೊಂದಿದ್ದಾಳೆನ್ನುವ ಕಾರಣಕ್ಕೆ ಹಲ್ಲೆ ನಡೆಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಯುವತಿಯರನ್ನು ಬಂಧಿಸಿದ್ದಾರೆ. ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...