alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸಿದವನ ಜೊತೆ ಮದುವೆಯಾಗಲು ಕಿಡ್ನಿ ಮಾರಲು ಮುಂದಾದ್ಲು

ಮದುವೆಯಾಗಲು ಪ್ರಿಯಕರ 1.80 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಾನೆ. ಪ್ರೀತಿಯ ಹುಚ್ಚಿಗೆ ಬಿದ್ದ ಯುವತಿ ಹಣ ಹೊಂದಿಸಲು ಮುಂದಾಗಿದ್ದಾಳೆ. ಇದಕ್ಕಾಗಿ ತನ್ನ ಕಿಡ್ನಿ ಮಾರಾಟ ಮಾಡುವ ಹುಚ್ಚು ನಿರ್ಧಾರ ಕೈಗೊಂಡಿದ್ದಾಳೆ.

ಪ್ರೀತಿಗಾಗಿ ಕಿಡ್ನಿ ಮಾರಲು ನಿರ್ಧರಿಸಿದ ಯುವತಿ ದೆಹಲಿಗೆ ಬಂದಿದ್ದಾಳೆ. ಲೇಡಿ ಹಾರ್ಡಿಂಗ್ ಆಸ್ಪತ್ರೆಗೆ ಬಂದ ಯುವತಿ ಕಿಡ್ನಿ ತೆಗೆಯುವಂತೆ ಹೇಳಿದ್ದಾಳೆ. ಜೊತೆಗೆ ಅದಕ್ಕೆ ಎಷ್ಟು ಬೆಲೆ ಎಂದು ಕೇಳಿದ್ದಾಳೆ. ಅನುಮಾನಗೊಂಡ ವೈದ್ಯರು, ಮಹಿಳಾ ಆಯೋಗಕ್ಕೆ ಕರೆ ಮಾಡಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಯುವತಿ ಬಿಹಾರ್ ಮೂಲದವಳು ಎಂಬುದು ಗೊತ್ತಾಗಿದೆ. ಯುವತಿಗೆ ಚಿಕ್ಕ ವಯಸ್ಸಿನಲ್ಲಿಯೇ ವಿಚ್ಛೇದನವಾಗಿದೆ. ನಂತ್ರ ಪಕ್ಕದ ಮನೆಯ ವ್ಯಕ್ತಿಯನ್ನು ಪ್ರೀತಿಸಲು ಶುರುಮಾಡಿದ್ದಾಳೆ. ಆತ ಮದುವೆಯಾಗಲು ಹಣ ಕೇಳಿದ್ದಾನೆ. ಹಾಗಾಗಿ ಹಣ ಹೊಂದಿಸಲು ಮುಂದಾದ ಯುವತಿ ಕಿಡ್ನಿ ಮಾರುವ ನಿರ್ಧಾರಕ್ಕೆ ಬಂದಿದ್ದಾಳೆ. ಕೌನ್ಸಿಲಿಂಗ್ ವೇಳೆ ಎಷ್ಟು ಪ್ರಯತ್ನಪಟ್ಟರೂ ಹುಡುಗಿ ಹಾಗೂ ಆಕೆ ತಾಯಿ, ಯುವಕನ ವಿರುದ್ಧ ದೂರು ನೀಡಲು ಮುಂದಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...