alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಬಾರರ ಬಾಳಲ್ಲಿ ಬೆಳಕು ತರ್ತಿದೆ ದೀಪಾವಳಿ

gorakhpur-new

ಭಯೋತ್ಪಾದನೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜೊತೆ ಚೀನಾದ ವಿರುದ್ಧವೂ ಭಾರತೀಯರು ತಿರುಗಿಬಿದ್ದಿದ್ದಾರೆ. ಮೇಡ್ ಇನ್ ಚೀನಾ ಉತ್ಪನ್ನಗಳನ್ನು ತಿರಸ್ಕರಿಸುತ್ತಿದ್ದಾರೆ. ಇದರಿಂದಾಗಿ ದೀಪಾವಳಿ ಸಂದರ್ಭದಲ್ಲಿ ಮಾರುಕಟ್ಟೆಯಾಳ್ತಿದ್ದ ಚೀನಾ ದೀಪಗಳ ಮಾರಾಟ ಕಡಿಮೆಯಾಗಿದೆ. ಖುಷಿಯ ವಿಚಾರವೆಂದ್ರೆ ಮಣ್ಣಿನಿಂದ ಮಾಡಿದ ಭಾರತೀಯ ದೀಪಗಳ ಬೇಡಿಕೆ ಗಣನೀಯವಾಗಿ ಏರಿಕೆ ಕಂಡಿದೆ.

ಗೋರಕ್ಪುರದಲ್ಲಿ ಮಣ್ಣಿನ ದೀಪಗಳ ಬೇಡಿಕೆ ಶೇಕಡಾ 45ರಷ್ಟು ಏರಿಕೆ ಕಂಡಿದೆ. ದೀಪಾವಳಿ ಸಂದರ್ಭದಲ್ಲಿ ಮನೆ ಬೆಳಗಲು ಜನರು ಮಣ್ಣಿನಿಂದ ಮಾಡಿದ ದೀಪಗಳನ್ನು ಖರೀದಿ ಮಾಡ್ತಿದ್ದಾರೆ. ಮಣ್ಣಿನ ಕಳಶ, ದೇವರ ಮೂರ್ತಿ ಹಾಗೂ ಮಣ್ಣಿನಿಂದ ಮಾಡಿದ ಕಲಾತ್ಮಕ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಒಂದೇ ಸಮನೆ ಹೆಚ್ಚಾಗುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಕುಂಬಾರ ಸಮುದಾಯ ರಾತ್ರಿ- ಹಗಲೆನ್ನದೆ ಮಣ್ಣಿನ ವಸ್ತುಗಳ ತಯಾರಿಕೆಯಲ್ಲಿ ನಿರತವಾಗಿದೆ.

ಮೂರ್ನಾಲ್ಕು ತಿಂಗಳುಗಳ ಹಿಂದೆಯೇ ಚೀನಾದಿಂದ ದೀಪದ ಸಾಮಗ್ರಿ ಸೇರಿದಂತೆ ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ತರಿಸಿಕೊಂಡಿದ್ದ ದೊಡ್ಡ ವ್ಯಾಪಾರಿಗಳಿಗೆ ಭಯ ಶುರುವಾಗಿದೆ. ಅಂಗಡಿಯಲ್ಲಿ ಚೀನಾ ವಸ್ತುಗಳನ್ನಿಡಲು ಅವರು ಹೆದರುತ್ತಿದ್ದು, ನಷ್ಟದ ಭೀತಿಗೊಳಗಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...