alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ 9 ವರ್ಷಗಳ ಬಳಿಕ ಪೋಷಕರ ಮಡಿಲು ಸೇರಿದ ಬಾಲಕನ ರೋಚಕ ಕಥೆ

6 ವರ್ಷದ ಹುಡುಗ ದಕ್ಷಿಣ ದೆಹಲಿಯ ಚತ್ರಾಪುರ ಪ್ರದೇಶದ ಆಟದ ಮೈದಾನದಿಂದ ನಾಪತ್ತೆಯಾಗಿದ್ದ. 9 ವರ್ಷಗಳ ನೋವು, ಹುಡುಕಾಟದ ಬಳಿಕ ಆತ ಗುರುಗ್ರಾಮದಲ್ಲಿ ಪತ್ತೆಯಾಗಿದ್ದು ಕೊನೆಗೂ ಮನೆ ಸೇರಿದ್ದಾನೆ.

2009ರ ಮಾರ್ಚ್ 2ರಂದು ಹಸನ್ ಆಲಿ ತನ್ನ ಪೋಷಕರಿಂದ ದೂರವಾಗಿದ್ದ. ಗುರುಗ್ರಾಮದ ಚೈಲ್ಡ್ ಕೇರ್ ಇನ್‌ಸ್ಟಿಟ್ಯೂಟ್‌ (ಸಿಸಿಐ)ನಲ್ಲಿ ಜೀವನ ಸಾಗಿಸುತ್ತಿದ್ದ ಆತ ಮತ್ತೆ ತಂದೆ-ತಾಯಿ ಕಾಣಲು ಸಿಗುತ್ತಾರೆ ಎಂಬ ನಿರೀಕ್ಷೆಯನ್ನೇ ಬಿಟ್ಟಿದ್ದ. ಆದರೆ ಕೆಲ ತಿಂಗಳ ಹಿಂದೆ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋದ ಟ್ರಿಪ್ ಆತನ ಜೀವನದ ದಿಕ್ಕೇ ಬದಲಿಸಿತು. ಮರಳಿ ತಾಯಿಯ ಮಡಿಲಿನತ್ತ ದಾರಿ ತೋರಿಸಿತು.

ಜುಲೈ 22ರಂದು ಸಿಸಿಐನಿಂದ ತನ್ನ 100 ಮಂದಿ ಗೆಳೆಯರೊಂದಿಗೆ ಹಸನ್ ಸೋನೆಪೇಟ್‌ನಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಪ್ರಯಾಣಸಿದ್ದ. ಅವರು ಚತ್ರಾಪುರ ಪ್ರದೇಶವನ್ನು ದಾಟುತ್ತಿದ್ದಂತೆ ಆತ ತನ್ನ ಸಂಸ್ಥೆಯ ಸಂಯೋಜಕರ ಬಳಿ, ಈ ಸ್ಥಳವನ್ನು ನಾನು ಮೊದಲು ನೋಡಿದ್ದೇನೆ, ಕುಟುಂಬದೊಂದಿಗೆ ಅನೇಕ ಬಾರಿ ಇಲ್ಲಿಗೆ ಬಂದ ನೆನಪಿದೆ ಎಂದು ಹೇಳಿಕೊಂಡ.

ಕುಟುಂಬದೊಂದಿಗೆ ಹಸನ್ ಆಲಿಯನ್ನು ಒಂದುಗೂಡಿಸಲು ಈ ಸುಳಿವು ಸಾಕಾಯಿತು. ನಿಯಮಿತವಾಗಿ ಅವರಿಬ್ಬರು ಆ ಪ್ರದೇಶಕ್ಕೆ ಬಂದು ಅಲೆದಾಡತೊಡಗಿದರು. ಆದರೆ ಆ ವೇಳೆಗೆ ಹಸನ್‌ನ ಕುಟುಂಬ 60 ಕಿ.ಮೀ. ದೂರದ ಧರುಹೆರಾನಲ್ಲಿ ಮನೆ ಮಾಡಿಕೊಂಡಿದ್ದರು.

ಆಟದ ಮೈದಾನದ ಬಳಿಯ ಮಸೀದಿಯನ್ನು ಹುಡುಕಿಕೊಂಡು ಅಲ್ಲಿಯ ಮೌಲ್ವಿಯನ್ನು ಮಾತಾಡಿಸಿದರು. ಅವರು ಹಸನ್‌ನ ಗುರುತು ಹಿಡಿದರು. ಅವರೇ ಹಸನ್‌ನ ಕುಟುಂಬದವರ ಸಂಪರ್ಕ ಸಂಖ್ಯೆ ನೀಡಿ ಕುಟುಂಬದೊಂದಿಗೆ ಆತನನ್ನು ಸೇರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...