alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಎದುರೇ ಮಗನನ್ನು ಬಲಿ ಪಡೆದಿದೆ ಸ್ಕೂಲ್ ಬಸ್

bus

ನವಿ ಮುಂಬೈನ ನೆರುಲ್ ನಲ್ಲಿ 9 ವರ್ಷದ ಬಾಲಕನೊಬ್ಬ ಶಾಲಾ ಬಸ್ ಅಡಿ ಸಿಲುಕಿ ತಾಯಿಯ ಕಣ್ಣೆದುರಲ್ಲೇ ಮೃತಪಟ್ಟಿದ್ದಾನೆ. ಎನ್ ಸಿ ಆರ್ ಡಿ ಸ್ಟೆರ್ಲಿಂಗ್ ಸ್ಕೂಲ್ ನಲ್ಲಿ ಓದ್ತಾ ಇದ್ದ ಸಂವೇದ್ ತರಲ್ಕರ್ ಶಾಲೆ ಮುಗಿಸಿ ಮನೆಗೆ ಬರ್ತಾ ಇದ್ದ. ರಸ್ತೆ ದಾಟುತ್ತಿದ್ದಾಗ ಮಕ್ಕಳನ್ನು ಹೊತ್ತು ಬರ್ತಾ ಇದ್ದ ಶಾಲಾ ಬಸ್ ಒಂದು ಡಿಕ್ಕಿ ಹೊಡೆದಿದೆ.

ಆ ರಭಸಕ್ಕೆ ಸಂವೇದ್ ಸಂಪೂರ್ಣ ನುಜ್ಜುಗುಜ್ಜಾಗಿದ್ದ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದ. ರಸ್ತೆಯ ಇನ್ನೊಂದು ಬದಿಯಲ್ಲಿ ಮನೆಯ ಗೇಟ್ ಬಳಿ ನಿಂತು ತಾಯಿ ಮಗ ರಸ್ತೆ ದಾಟುವುದನ್ನೇ ನೋಡುತ್ತಿದ್ರು. ಮಗನ ಬರುವಿಕೆಯಲ್ಲಿದ್ದ ಅಮ್ಮನ ಕಣ್ಣೆದುರೇ ಸಂವೇದ್ ಶವವಾಗಿ ಹೋಗಿದ್ದಾನೆ.

ಅಪಘಾತಕ್ಕೆ ಕಾರಣನಾದ ಬಸ್ ಚಾಲಕ ಗೋವಿಂದ್ ರೈ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಂವೇದ್ ತಂದೆ ವಿದ್ಯಾಧರ್, ಎಂಎನ್ಸಿ ಕಂಪನಿಯೊಂದರಲ್ಲಿ ಉದ್ಯೋಗಿ. ಆತನಿಗೆ 5 ವರ್ಷದ ಪುಟ್ಟ ತಂಗಿ ಕೂಡ ಇದ್ದಾಳೆ. ಶಾಲಾ ಬಸ್ ಚಾಲಕ ಅತ್ಯಂತ ವೇಗವಾಗಿ ಬಂದಿದ್ದರಿಂದ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಕಣ್ಣೆದುರಲ್ಲೇ ಮಗನ ಭೀಕರ ಸಾವು ಕಂಡ ಸಂವೇದ್ ತಾಯಿ ಸಂಪೂರ್ಣ ಜರ್ಜರಿತರಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...