alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ಪ್ರಾಣಕ್ಕೆ ಕುತ್ತು ತಂತು ಯೂಟ್ಯೂಬ್ ವಿಡಿಯೋ

koduri-ghanshyamಯೂಟ್ಯೂಬ್ ನಲ್ಲಿ ಸಾಹಸ ದೃಶ್ಯದ ವಿಡಿಯೋ ಒಂದನ್ನು ನೋಡಿದ 12 ವರ್ಷದ ಬಾಲಕನೊಬ್ಬ ಅದನ್ನು ಅನುಕರಿಸಲು ಹೋಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಕರೀಂ ನಗರದಲ್ಲಿ ನಡೆದಿದೆ.

ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೋಡೂರಿ ಘನಶ್ಯಾಮ್ ಮೃತಪಟ್ಟ ಬಾಲಕನಾಗಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದ ಕೋಡೂರಿ ರಘು ಎಂಬವರ ಕಿರಿಯ ಪುತ್ರನಾಗಿದ್ದಾನೆ.

ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದ್ದ ವಿಡಿಯೋ ಒಂದರಲ್ಲಿ ಬಾಯಲ್ಲಿ ಸೀಮೆಎಣ್ಣೆ ಹಾಕಿಕೊಂಡು ಬೆಂಕಿ ಉಗುಳುವುದನ್ನು ನೋಡಿದ್ದ ಘನಶ್ಯಾಮ್, ನವೆಂಬರ್ 17 ರಂದು ಬೆಳಿಗ್ಗೆ ಮನೆಯವರೆಲ್ಲ ಇನ್ನೂ ಮಲಗಿದ್ದ ವೇಳೆ ತಾನೂ ಆ ಸಾಹಸ ಮಾಡಲು ಮುಂದಾಗಿದ್ದಾನೆ. ಬಾಯಲ್ಲಿ ಸೀಮೆಎಣ್ಣೆ ಹಾಕಿಕೊಂಡು ಅದನ್ನು ಉರಿಯುತ್ತಿದ್ದ ಪಂಜಿನ ಮೇಲೆ ಉಗುಳಿದಾಗ ಆತನ ದೇಹಕ್ಕೆ ಬೆಂಕಿ ಹತ್ತಿದ್ದು, ಚೀರಾಟ ಕೇಳಿದ ಮನೆಯವರು ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆರು ದಿನಗಳ ಕಾಲ ಸಾವು- ಬದುಕಿನ ನಡುವೆ ಸೆಣೆಸಾಟ ನಡೆಸಿದ ಬಾಲಕ ಮಂಗಳವಾರದಂದು ಸಾವನ್ನಪ್ಪಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...