alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಗೆ ನೆರವಾಗಲು ಈತ ಮಾಡಿದ್ದೇನು ಗೊತ್ತಾ..?

ಮುಂಬೈ: ಸಂಕಷ್ಟದಲ್ಲಿದ್ದ ಬಾಲಕಿಯ ಕುಟುಂಬಕ್ಕೆ ನೆರವಾಗಲು, ಬಾಲಕನೊಬ್ಬ ಅಪಹರಣಕ್ಕೆ ಒಳಗಾಗಿದ್ದೇನೆಂದು ಹೇಳಿ, ತಂದೆಗೆ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ.

ಸಬ್ ಅರ್ಬನ್ ಸಾಕಿನಾಕ ಪ್ರದೇಶದ ನಿವಾಸಿಯಾಗಿರುವ 16 ವರ್ಷದ ಬಾಲಕ ಇಂತಹ ಕೆಲಸ ಮಾಡಿದವ. ಸಂಕಷ್ಟದಲ್ಲಿದ್ದ ತನ್ನ ಗೆಳತಿಯ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ತನ್ನ ತಂದೆಯಿಂದ ಹಣ ಪಡೆದುಕೊಳ್ಳಲು ಮುಂದಾಗಿದ್ದಾನೆ.

19 ವರ್ಷದ ಸ್ನೇಹಿತನೊಂದಿಗೆ ಸೇರಿ ತನ್ನನ್ನು ಅಪಹರಿಸಿದಂತೆ ನಾಟಕವಾಡಿದ್ದಾನೆ. ಬಾಲಕನನ್ನು ಅಪಹರಿಸಿದವರು ಪಾಲ್ಘಾರ್ ಜಿಲ್ಲೆಯ ಮನೊರ್ ಲಾಡ್ಜ್ ನಲ್ಲಿ ಇರಿಸಿದ್ದಾರೆ.

ಆತನ ತಂದೆಗೆ ಕರೆ ಮಾಡಿ 50 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆತಂಕಕ್ಕೆ ಒಳಗಾದ ಬಾಲಕನ ತಂದೆ ಸಾಕಿನಾಕ ಪೊಲೀಸರಿಗೆ ದೂರು ನೀಡಿದ್ದು, ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಅವರ ಸಲಹೆಯಂತೆ ಅಪಹರಣಕಾರರ ಬಳಿಗೆ ಬಾಲಕನ ತಂದೆ ಹಣ ತೆಗೆದುಕೊಂಡು ಹೋಗಿದ್ದು, ಲಾಡ್ಜ್ ಕೊಠಡಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಅಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಾಲಕನೇ ಗೆಳತಿಯ ಕುಟುಂಬಕ್ಕೆ ನೆರವಾಗಲು ತನ್ನನ್ನೇ ಕಿಡ್ನಾಪ್ ಮಾಡಿಕೊಂಡಿರುವುದು ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...