alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಪ್ರೇಮಿ ಜೊತೆ ಮದುವೆಯಾಗ್ವಾಗ ಬಂದ ಹಳೆ ಪ್ರೇಮಿ

ಬಿಹಾರದ ಶೇಖ್ಪುರದಲ್ಲಿ ಪ್ರೇಮಿಗಳಿಬ್ಬರ ಮದುವೆ ನಡೆಯುತ್ತಿತ್ತು. ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಮುಂದೆ ಹಾರ ಬದಲಿಸಿಕೊಳ್ಳುತ್ತಿದ್ದರು. ಈ ವೇಳೆ ಹಳೆ ಪ್ರೇಮಿಯೊಬ್ಬನ ಎಂಟ್ರಿಯಾಗಿದೆ. 2 ವರ್ಷಗಳಿಂದ ನಾವಿಬ್ಬರು ಪ್ರೀತಿಸುತ್ತಿದ್ದೇವೆ. ಈಗ ಬೇರೆಯವರ ಜೊತೆ ಮದುವೆಯಾಗ್ತಿದ್ದಾಳೆಂದು ಪ್ರೇಮಿ ಆರೋಪ ಮಾಡಿದ್ದಾನೆ.

ದೇವಸ್ಥಾನದಲ್ಲಿ ಹೊಸ ಪ್ರೇಮಿ ಜೊತೆ ನಿಂತಿದ್ದ ಹುಡುಗಿ ಹಳೆ ಪ್ರೇಮಿಯನ್ನು ಗುರುತು ಹಿಡಿಯಲಿಲ್ಲ. ಈತ ಯಾರೆಂಬುದು ಗೊತ್ತಿಲ್ಲ ಎಂದಿದ್ದಾಳೆ. ಇದ್ರಿಂದ ಬೇಸರಗೊಂಡ ಹಳೆ ಪ್ರೇಮಿ ಬರಿಗೈನಲ್ಲಿ ಮನೆಗೆ ಹೋಗಿದ್ದಾನೆ.

ಶೇಖ್ಪುರ ಗ್ರಾಮವೊಂದರ ಕಂಚನ್ ತನ್ನ ಸಹೋದರಿ ಮನೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾಳೆ. ಅಲ್ಲಿ ಕರಣ್  ಪರಿಚಯವಾಗಿದೆ. ಸ್ನೇಹ ಪ್ರೀತಿಗೆ ತಿರುಗಿದೆ. ಮನೆಯವರ ಮುಂದೆ ತಮ್ಮ ಪ್ರೀತಿ ವಿಷ್ಯವನ್ನು ಹೇಳಿದ್ದಾರೆ. ಕಂಚನ್ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಅವರು ಮದುವೆಗೆ ಒಪ್ಪಿಗೆ ನೀಡಿಲ್ಲ. ಕರಣ್, ಕಂಚನ್ ಜೊತೆ ತನ್ನೂರಿಗೆ ಬಂದು ಪಂಚಾಯತಿ ಮುಂದೆ ವಿಷ್ಯ ಪ್ರಸ್ತಾಪಿಸಿದ್ದಾನೆ. ಕೊನೆಯವರೆಗೂ ಕಂಚನ್ ಮನೆಯವರು ಮದುವೆಗೆ ವಿರೋಧಿಸುತ್ತಲೇ ಮಗಳಿಗೆ ಆಶೀರ್ವಾದ ಮಾಡಿದ್ದಾರೆ. ಆದ್ರೆ ಮಂಟಪಕ್ಕೆ ಬಂದಿದ್ದ ಇನ್ನೊಬ್ಬ ಪ್ರೇಮಿ ಯಾರೆಂಬ ಬಗ್ಗೆ ಸರಿಯಾಗಿ ತಿಳಿದುಬಂದಿಲ್ಲ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...