alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡೂ ಕೈಗಳಿಲ್ಲದಿದ್ರೂ ಹೊಲಿಗೆ ಮಾಡ್ತಾನೆ ಈ ಸಾಹಸಿ

tailor

ಅಂಗವೈಕಲ್ಯ ಒಂದು ಶಾಪ ಎಂದುಕೊಳ್ಳುವವರೇ ಹೆಚ್ಚು. ಆದ್ರೆ ಮನಸ್ಥೈರ್ಯ ಗಟ್ಟಿಯಾಗಿದ್ರೆ ದೈಹಿಕ ಊನ ಯಾವ ಕೆಲಸಕ್ಕೂ ಅಡ್ಡಿಯಾಗುವುದಿಲ್ಲ ಅನ್ನೋದಕ್ಕೆ ಹರಿಯಾಣದ ಈ ವ್ಯಕ್ತಿಯೇ ಸಾಕ್ಷಿ. 45 ವರ್ಷದ ಮದನ್ ಲಾಲ್ ಗೆ ಹುಟ್ಟುವಾಗ್ಲೇ ಎರಡೂ ಕೈಗಳೂ ಇರಲಿಲ್ಲ.

ವಿಕಲಚೇತನ ಅನ್ನೋ ಕಾರಣಕ್ಕೆ ಶಾಲೆಯಲ್ಲಿ ಪ್ರವೇಶವೂ ಸಿಗಲಿಲ್ಲ. ಹಾಗಾಗಿ ಶಿಕ್ಷಣ ಗಗನ ಕುಸುಮವಾಯ್ತು. ಅದರಿಂದ ಧೃತಿಗೆಡದ ಮದನ್ ಲಾಲ್ ಹೊಲಿಗೆ ಮಾಡಲು ಆರಂಭಿಸಿದ. ಎರಡೂ ಕೈಗಳು ಇಲ್ಲದಿದ್ರೂ ಈಗ ಕಾಲಿನಿಂದ್ಲೇ ಸುಂದರವಾದ ಬಟ್ಟೆಗಳನ್ನು ಈತ ಹೊಲಿಯುತ್ತಾನೆ.

ಅಳತೆ ತೆಗೆದುಕೊಳ್ಳುವುದು, ಬಟ್ಟೆ ಕತ್ತರಿಸುವುದು ಎಲ್ಲವನ್ನೂ ಮದನ್ ಲಾಲ್ ಕಾಲಿನಿಂದ್ಲೇ ಮಾಡುತ್ತಾನೆ. ಕುಟುಂಬದವರು ಕೂಡ ಅವನಿಗೆ ಸಹಕಾರ ನೀಡುತ್ತಿಲ್ಲ. ಶಾಲೆಯಲ್ಲಿ ಪ್ರವೇಶ ದೊರಕದೇ ಇದ್ದಾಗ ಅವನಿಗೆ ಟೈಲರಿಂಗ್ ತರಬೇತಿ ನೀಡಲು ಯಾರೂ ಮುಂದೆ ಬರಲಿಲ್ಲ.

ಆಗ ಬೇರೆ ನಗರಕ್ಕೆ ತೆರಳಿ ಕೇವಲ 15 ದಿನಗಳಲ್ಲಿ ಮದನ್ ಲಾಲ್ ಹೊಲಿಗೆ ಕಲಿತು ಬಂದಿದ್ದ. ತನ್ನ ಊರಿನಲ್ಲೇ ಚಿಕ್ಕದೊಂದು ಅಂಗಡಿ ತೆರೆದಿದ್ದ. ಮದನ್ ಲಾಲ್ ನ ಪ್ರತಿಭೆ ನೋಡಿ ಈಗ ಎಲ್ಲರೂ ಅಚ್ಚರಿಪಡ್ತಾರೆ. ಅವನ ಬಳಿಗ ಬಟ್ಟೆಗಳನ್ನು ಹೊಲಿಸ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...