alex Certify
ಕನ್ನಡ ದುನಿಯಾ       Mobile App
       

Kannada Duniya

ಗಡಿಯಲ್ಲಿ ಗ್ರಾಮಸ್ಥರೊಂದಿಗೆ ಯೋಧರ ‘ಹೋಳಿ’ ರಂಗು

Holi-celebrated21205

ದೇಶಾದ್ಯಂತ ಇಂದು ಸಂಭ್ರಮದ ಹೋಳಿ ಆಚರಣೆ ನಡೆಯುತ್ತಿದ್ದು, ಇಂಡೋ-ಪಾಕ್ ಗಡಿಯಲ್ಲಿ ಯೋಧರು, ಬಾಲಿವುಡ್ ನ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪರಸ್ಪರ ಬಣ್ಣಗಳನ್ನು ಎರಚಿ ಹೋಳಿ ಹಬ್ಬಕ್ಕೆ ಮತ್ತಷ್ಟು ರಂಗು ತಂದಿದ್ದಾರೆ.

ಗಡಿಯಲ್ಲಿ ಸದಾ ಪಹರೆ ಕಾಯುತ್ತ ದೇಶದ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು, ಸನಿಹದ ಜ್ಯೋತಿ ಎಂಬ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಗ್ರಾಮಸ್ಥರು ಹಾಗೂ ಮಕ್ಕಳೊಂದಿಗೆ ಪರಸ್ಪರ ಬಣ್ಣ ಹಾಕಿಕೊಳ್ಳುವ ಮೂಲಕ ಹೋಳಿ ಆಚರಿಸಿ ಸಂಭ್ರಮಿಸಿದರು.

ಅಲ್ಲದೇ ಈ ಸಮಯದಲ್ಲಿ ‘ರಂಗ್ ಬರ್ಸೆ ಭೀಗೆ ಚುನರವಾಲಿ ರಂಗ್ ಬರ್ಸೆ’ ಹಾಡಿಗೆ ಅಲ್ಲಿನ ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ವಿಶೇಷವೆಂದರೆ ಈ ಪ್ರದೇಶದಲ್ಲಿ ಸದಾ ಗುಂಡಿನ ಮೊರೆತವನ್ನೇ ಕೇಳುತ್ತಿದ್ದ ಗ್ರಾಮಸ್ಥರಿಗೆ ಯೋಧರ ಜತೆಗಿನ ಈ ಸಂಭ್ರಮಾಚರಣೆ ಹೊಸ ಉತ್ಸಾಹವನ್ನು ತುಂಬಿದ್ದು ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...