alex Certify
ಕನ್ನಡ ದುನಿಯಾ       Mobile App
       

Kannada Duniya

ಗಡಿಯಲ್ಲಿ ‘ಪಾಕಿ’ಗಳು ಕೊರೆದಿದ್ದ ಸುರಂಗ ಪತ್ತೆ

tunel

ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತದೊಳಕ್ಕೆ ನುಸುಳಲು ಪಾಕಿಸ್ತಾನ ಕೊರೆದಿದ್ದ 20 ಮೀಟರ್ ಉದ್ದದ ಸುರಂಗವನ್ನು ಬಿ ಎಸ್ ಎಫ್ ಯೋಧರು ಪತ್ತೆ ಮಾಡಿದ್ದಾರೆ. ರಾಮಗಢ ವಲಯದಲ್ಲಿ ಈ ಸುರಂಗ ಪತ್ತೆಯಾಗಿರೋದಾಗಿ ಬಿಎಸ್ಎಫ್ ಡಿಐಜಿ ಧರ್ಮೇಂದ್ರ ಪರೀಕ್ ತಿಳಿಸಿದ್ದಾರೆ.

ಈ ಸುರಂಗ 2.5X2.5 ಅಡಿ ಅಗಲವಾಗಿತ್ತು. ಈ ಸುರಂಗದ ಮೂಲಕ ಉಗ್ರರನ್ನು ಪಾಕಿಸ್ತಾನ, ಭಾರತದೊಳಕ್ಕೆ ಕಳಿಸಲು ಸ್ಕೆಚ್ ಹಾಕಿತ್ತು. ಪಾಕಿಸ್ತಾನದಿಂದ ಆರಂಭವಾದ ಈ ಸುರಂಗ ಭಾರತದ ಗಡಿಯಲ್ಲಿ ಅಂತ್ಯವಾಗಿದೆ.

ಈ ಸುರಂಗ ನಿರ್ಮಾಣ ಕಾರ್ಯ ಪೂರ್ತಿಯಾಗಿ ಮುಗಿದಿರಲಿಲ್ಲ. ಅಷ್ಟರಲ್ಲಾಗ್ಲೇ ಅದನ್ನು ಪತ್ತೆ ಮಾಡಿದ ಭಾರತೀಯ ಸೇನೆ, ಮುಚ್ಚಿ ಹಾಕಿದೆ. ಭಾರತದೊಳಕ್ಕೆ ಭಯೋತ್ಪಾದಕರ ಒಳ ನುಸುಳುವಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಅದನ್ನು ತಡೆಯಲೆಂದೇ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...