alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರೈಸಿದ ವೇಗದ ರೈಲು

PTI7_9_2016_000161Bದೇಶದಲ್ಲಿ ತನ್ನ ಸಂಚಾರ ಆರಂಭಿಸಲಿರುವ ಅತಿ ವೇಗದ ರೈಲು, ಗುರುವಾರದಂದು ಮಥುರಾ- ಪಲ್ವಾಲ್ ನಡುವೆ ಯಶಸ್ವಿಯಾಗಿ ಪರೀಕ್ಷಾರ್ಥ ಸಂಚಾರವನ್ನು ಪೂರೈಸಿದೆ.

ಜುಲೈ 14 ರಂದು ಖಾಲಿ ಬೋಗಿಯೊಂದಿಗೆ ಈ ರೈಲು ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಂಚರಿಸಿದ್ದು, ಗುರುವಾರ ಮತ್ತೊಮ್ಮೆ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಪ್ರಯಾಣಿಕರ ಬದಲಿಗೆ ತಲಾ 70 ಕೆ.ಜಿ. ಮರಳು ಚೀಲ ಇರಿಸಲಾಗಿತ್ತು. ಈ ವೇಳೆ ರೈಲು 170 ರಿಂದ 180 ಕಿ.ಮೀ. ವೇಗದಲ್ಲಿ ಸಂಚರಿಸಿದೆ ಎಂದು ಹೇಳಲಾಗಿದೆ.

ಮುಂದಿನ ವಾರ ದೆಹಲಿ ಮತ್ತು ಮುಂಬೈ ನಡುವೆ ಈ ರೈಲು ಮತ್ತೊಂದು ಪರೀಕ್ಷಾರ್ಥ ಸಂಚಾರ ನಡೆಸಲಿದ್ದು, ಆ ಬಳಿಕ ಸಾರ್ವಜನಿಕ ಸಂಚಾರವನ್ನು ಆರಂಭಿಸಲಿದೆ ಎಂದು ಹೇಳಲಾಗಿದೆ.

ಪರೀಕ್ಷಾರ್ಥ ಸಂಚಾರ ನಡೆಸಿದ ರೈಲು, ಮಥುರಾ ಜಂಕ್ಷನ್ ಗೆ ಆಗಮಿಸಿದ ವೇಳೆ ನಿಲ್ದಾಣದಲ್ಲಿದ್ದ ನೂರಾರು ಮಂದಿ ಚಪ್ಪಾಳೆ ಹೊಡೆದು ಸ್ವಾಗತಿಸಿದರಲ್ಲದೆ ಶೀಘ್ರದಲ್ಲೇ ಈ ರೈಲು ತನ್ನ ದೈನಂದಿನ ಸಂಚಾರವನ್ನು ಆರಂಭಿಸಲಿ ಎಂದು ಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...