alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಬೆ ಹೈಕೋರ್ಟ್ ನೀಡಿದೆ ಈ ವಿಶಿಷ್ಟ ತೀರ್ಪು

ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ವಿಶಿಷ್ಟ ತೀರ್ಪು ನೀಡಿದೆ. ಕೇರಳದ ಪ್ರವಾಹಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 1ಕೋಟಿ 50 ಲಕ್ಷ ರೂಪಾಯಿ ನೀಡುವಂತೆ ಆದೇಶ ನೀಡಿದೆ. ಆಗಸ್ಟ್ 28ರಂದು ಈ ಪ್ರಮುಖ ತೀರ್ಪನ್ನು ನೀಡಿದ ನ್ಯಾಯಾಲಯ, ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುವಂತೆ ಖಾಸಗಿ ಕಂಪನಿಯೊಂದಕ್ಕೆ ಸೂಚಿಸಿದೆ.

ಪ್ರಮುಖ ಔಷಧ ತಯಾರಿಕಾ ಸಂಸ್ಥೆಗಳಾದ ಗ್ಲೆನ್ ಮಾರ್ಕ್ ಮತ್ತು ಗಾಲ್ಫಾ ಲ್ಯಾಬೊರೇಟರೀಸ್ ನಡುವೆ ವಿವಾದವೊಂದು ಕೋರ್ಟ್ನಲ್ಲಿ ವಿಚಾರಣೆಗೆ ಬಂದಿತ್ತು. ತನ್ನ ಉತ್ಪನ್ನಗಳನ್ನ ಗಾಲ್ಫಾ ಲ್ಯಾಬೊರೇಟರೀಸ್ ನಕಲು ಮಾಡಿ ಮಾರಾಟ ಮಾಡ್ತಿದೆ ಅನ್ನೋ ಆರೋಪವನ್ನು ಗ್ಲೆನ್ ಮಾರ್ಕ್ ಸಂಸ್ಥೆ ಮಾಡಿತ್ತು. ಈ ಹಂತದಲ್ಲಿ ನಡೆದ ವಾದ-ವಿವಾದಗಳಿಂದ ಗಾಲ್ಫಾ ಸಂಸ್ಥೆ ತಪ್ಪು ಮಾಡಿರೋದು ಸಾಕ್ಷಾಧಾರಗಳ ಮೂಲಕ ಸಾಬೀತಾಯ್ತು.

ಆನಂತರ ತೀರ್ಪು ಪ್ರಕಟಿಸಿದ ನ್ಯಾಯಾಲಯ ಔಷಧಗಳೆಂದ್ರೆ ಸ್ವೀಟ್ ಅಲ್ಲ. ಸಾರ್ವಜನಿಕರ ಬಗ್ಗೆ ಔಷಧ ತಯಾರಿಕಾ ಸಂಸ್ಥೆಗಳು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಲಾಭದ ಉದ್ದೇಶವನ್ನಷ್ಟೆ ಹೊಂದಿರುವ ಹಲವು ಕಂಪನಿಗಳು ಸಾಮಾಜಿಕ ಬದ್ಧತೆಯನ್ನು ಮರೆಯುತ್ತಿವೆ. ಈ ನಿಟ್ಟಿನಲ್ಲಿ ಗಾಲ್ಫಾ ಸಂಸ್ಥೆ 1ಕೋಟಿ 50 ಲಕ್ಷ ರುಪಾಯಿಯ ದಂಡದ ಮೊತ್ತವನ್ನು ಕೇರಳ ಪ್ರವಾಹ ಸಂತ್ರಸ್ಥರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಬೇಕು ಅಂತ ತೀರ್ಪು ನೀಡಿತ್ತು.

ಗ್ಲೆನ್ ಮಾರ್ಕ್ ಸಂಸ್ಥೆ ಕೂಡ ಗಾಲ್ಫಾ ಸಂಸ್ಥೆ ಎನ್ಜಿಓಗೆ ಹಣ ನೀಡುವಂತೆ ಗಾಲ್ಫಾ ಸಂಸ್ಥೆಗೆ ಸೂಚಿಸುವಂತೆ ಕೋರ್ಟ್ಗೆ ಮನವಿ ಸಲ್ಲಿಸಿತ್ತು. ಗ್ಲೆನ್ ಮಾರ್ಕ್ ಹೊರತಾಗಿ ಇತರೆ ಔಷಧ ತಯಾರಿಕಾ ಸಂಸ್ಥೆಗಳು ಕೂಡ ಗಾಲ್ಫಾ ವಿರುದ್ಧ ತಮ್ಮ ಉತ್ಪನ್ನವನ್ನು ನಕಲು ಮಾಡಿದ ಪ್ರಕರಣವನ್ನು ದಾಖಲಿಸಿವೆ. ಹಾಗಾಗಿ 1 ಕೋಟಿ 50 ಲಕ್ಷ ರೂಪಾಯಿನ್ನ ಕೇರಳ ಸಂತ್ರಸ್ಥರಿಗೆ ನೀಡಬೇಕು ಅಂತ ನ್ಯಾಯಾಲಯ ಸೂಚಿಸಿದೆ. ಅಲ್ಲದೇ ಯಾವುದೇ ಸಂಸ್ಥೆಯ ಉತ್ಪನ್ನಗಳನ್ನು ನಕಲು ಮಾಡಬಾರದು ಅಂತ ಗಾಲ್ಫಾಗೆ ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...