alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆಯ ಗರ್ಭ ತೆಗೆಸಲು ಹೈಕೋರ್ಟ್ ಅನುಮತಿ

ಅಪ್ರಾಪ್ತೆ ಮೇಲೆ ಅತ್ಯಾಚಾರವಾಗಿ, ಆಕೆ ಗರ್ಭಿಣಿಯಾಗಿದ್ರೆ ಆ ಗರ್ಭವನ್ನು ತೆಗೆಸಬಹುದು ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. 16 ವರ್ಷದೊಳಗಿನ ಬಾಲಕಿಯರು ಅತ್ಯಾಚಾರಕ್ಕೊಳಗಾಗಿ ಆಗಲೇ ಆಘಾತ ಅನುಭವಿಸಿರುತ್ತಾರೆ. ಅದರೊಂದಿಗೆ ಇಂತಹ ಬೇಡವಾದ ಗರ್ಭವು ಅವರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸುತ್ತದೆ. ಹೀಗಾಗಿ ಅತ್ಯಾಚಾರ ಸಂತ್ರಸ್ಥ ಮಕ್ಕಳ ಗರ್ಭವನ್ನು ತೆಗೆಸಬಹುದು ಅಂತಾ ಹೈಕೋರ್ಟ್ ತಿಳಿಸಿದೆ.

ಸಂಬಂಧಿಕರಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ 16 ವರ್ಷದ ಹುಡುಗಿಯ ತಾಯಿಯೊಬ್ಬರು, ಮಗಳ ಗರ್ಭ ತೆಗೆಸುವ ಕುರಿತು ಅರ್ಜಿ ಸಲ್ಲಿಸಿದ್ರು. ಇದರ ವಿಚಾರಣೆ ನಡೆಸಿದ , ಬಾಂಬೆ ಹೈಕೋರ್ಟ್ ನ ರಜಾ ಕಾಲದ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಎ.ಕೆ. ಮೆನನ್ ಮತ್ತು ಭಾರತಿ ಡಾಂಗ್ರೆ ಮಹತ್ವದ ಆದೇಶ ಹೊರಡಿಸಿದ್ದಾರೆ.

ಮೆಡಿಕಲ್ ಪ್ರೆಗ್ನೆನ್ಸಿ ಆಕ್ಟ್ ಪ್ರಕಾರ ಗರ್ಭಿಣಿಯಾಗಿ 20 ವಾರಗಳೊಳಗೆ ಅಬಾರ್ಷನ್ ಮಾಡಿಸಬೇಕು. ಆದ್ರೆ ಬಾಲಕಿ ತಾಯಿ ಅರ್ಜಿ ಸಲ್ಲಿಸಿದಾಗ ಆಕೆಗೆ 24 ವಾರಗಳಾಗಿದ್ದವು. ಹೀಗಾಗಿ ಕೋರ್ಟ್ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲು ಸೂಚಿಸಿತ್ತು. ನಂತರ ಈ ಸಮಿತಿಯು ನ್ಯಾಯಾಲಯಕ್ಕೆ ನೀಡಿದ ವರದಿಯಲ್ಲಿ ಬಾಲಕಿಗೆ ಗರ್ಭಪಾತ ಮಾಡಲು ದೈಹಿಕವಾಗಿ ಸಮರ್ಥಳಾಗಿದ್ದಾಳೆ ಎಂದು ತಿಳಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಈ ತೀರ್ಪು ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...