alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳಕ್ಕೆ ನೆರವು ನೀಡುವಂತೆ ಬಾಲಿವುಡ್ ಸ್ಟಾರ್ಸ್ ಮನವಿ

ದೇವರ ನಾಡು ವರುಣನ ಮುನಿಸಿಗೆ ನಲುಗಿದೆ. ದೇಶದ ಹಲವೆಡೆಯಿಂದ ಜನರು ನೆರೆ ಪೀಡಿತರಿಗೆ ಸಹಾಯ ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ಗಳು ಸಹ ನೆರವು ನೀಡಿದ್ದಾರೆ. ಅಲ್ಲದೆ ಸಾಮಾಜಿಕ ತಾಣಗಳ ಮೂಲಕ ತಮ್ಮ ಅಭಿಮಾನಿಗಳು, ಬೆಂಬಲಿಗರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಪ್ರವಾಹಕ್ಕೆ ಕೇರಳ ಜನ ಕಂಗಾಲಾಗಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ದೇವರ ನಾಡಿಗೆ ತಮ್ಮ ಕೈಲಾದ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದ್ದರು. ಉಳಿದಂತೆ ಆಲಿಯಾ ಭಟ್, ಸೋನಮ್ ಕಪೂರ್, ಕರಣ್ ಜೋಹರ್, ವರುಣ್ ಧವನ್, ಹೃತಿಕ್ ರೋಷನ್, ಶಾಹೀದ್ ಕಪೂರ್ ಸಹ ತಮ್ಮ ಕೈಲಾದ ಸಹಾಯ ಮಾಡಿದ್ದು, ಅಭಿಮಾನಿಗಳಿಗೂ ಮನವಿ ಮಾಡಿದ್ದಾರೆ. ಕೇರಳ ಮೂಲದ ಆಸ್ಕರ್ ಪ್ರಶಸ್ತಿ ವಿಜೇತ ರಸುಲ್ ಪೂಕುಟ್ಟಿ ಸಹ, ತಮ್ಮ ತವರಿಗೆ ನೆರವು ನೀಡಿದ್ದಾರೆ.

ಕೋಲ್ಕತಾ ಫುಟ್ಬಾಲ್ ತಂಡ ಸಹ ಕೇರಳದ ಸಂತ್ರಸ್ಥರ ನೆರವಿಗೆ ಒಂದು ಪಂದ್ಯವನ್ನು ಆಡಿದ್ದು, ಈ ಪಂದ್ಯದಿಂದ ಬಂದ ಸಂಪೂರ್ಣ ಹಣವನ್ನು ದೇವರ ನಾಡಿಗೆ ನೀಡಿದೆ. ಕೇರಳದಲ್ಲಿ ಸದ್ಯ 3750 ತುರ್ತು ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದ್ದು, ವಿವಿಧ ರೀತಿಯ 90 ಔಷಧಿಗಳು ಬೇಕಾಗಿರೋದಾಗಿ ಕೇರಳ ಸರ್ಕಾರ ತಿಳಿಸಿತ್ತು. ಅದರಂತೆ ಇಂದು ಕೇರಳಕ್ಕೆ ಅಗತ್ಯ ಔಷಧಿಗಳು ಸಿಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...