alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿ ಪರೀಕ್ಷಾ ಪ್ರವೇಶ ಪತ್ರದಲ್ಲಿ ‘ಬಿಗ್ ಬಿ’ ಚಿತ್ರ

ಲಖನೌ: ಉತ್ತರ ಪ್ರದೇಶದ ವಿವಿಯೊಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಫೋಟೋ ಹೊಂದಿರುವ ಐಡಿ ಕಾರ್ಡ್‌ ಅನ್ನು ವಿದ್ಯಾರ್ಥಿಗೆ ನೀಡಿದೆ. ಉತ್ತರ ಪ್ರದೇಶದ ಫೈಜಾಬಾದ್‌ನ ಡಾ. ರಾಮ್‌ ಮನೋಹರ್ ಲೋಹಿಯಾ ಯೂನಿವರ್ಸಿಟಿಯ ರವೀಂದ್ರ ಸಿಂಗ್ ಸ್ಮಾರಕ್ ಮಹಾವಿದ್ಯಾಲಯದ ಬಿ.ಎಡ್‌. ವಿದ್ಯಾರ್ಥಿ ಅಮಿತ್‌ ದ್ವಿವೇದಿಗೆ ಈ ರೀತಿಯ ಪ್ರವೇಶ ಪತ್ರವನ್ನು ನೀಡಲಾಗಿದೆ.

ಅಮಿತ್ ದ್ವಿವೇದಿ ನಮ್ಮ ಕಾಲೇಜಿನ ವಿದ್ಯಾರ್ಥಿ. ಪರೀಕ್ಷೆಗೆ ಅರ್ಜಿ ತುಂಬುವ ವೇಳೆ ವಿದ್ಯಾರ್ಥಿ ಅಥವಾ ಇಂಟರ್‌ನೆಟ್ ಕೆಫೆ ಮಾಡಿರುವ ತಪ್ಪಿನಿಂದ ಈ ರೀತಿ ಆಗಿರಬಹುದು ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ. ಅಲ್ಲದೆ, ವಿಶ್ವವಿದ್ಯಾನಿಲಯವೂ ಈ ತಪ್ಪು ಮಾಡಿರಬಹುದು ಎಂದೂ ಸಹ ಒಪ್ಪಿಕೊಂಡಿದೆ.

ಫೋಟೋ ಬದಲಾಗಿರುವ ಹಿನ್ನೆಲೆಯಲ್ಲಿ ಇದೀಗ ವಿದ್ಯಾರ್ಥಿ ಫಲಿತಾಂಶದ ಕುರಿತು ಚಿಂತೆಯಲ್ಲಿದ್ದಾನೆ. ಅದರಲ್ಲೂ ಅಮಿತಾಬ್‌ ಅವರ ಫೋಟೋ ಬಂದರೆ ಸಮಸ್ಯೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.

ಫೋಟೋ ವಿದ್ಯಾರ್ಥಿಯೇ ಅಪ್‌ಲೋಡ್‌ ಮಾಡಿರಬಹುದು ಅಥವಾ ಯಾವುದಾದರೂ ಸೈಬರ್‌ ಕೆಫೆಯಲ್ಲಿ ಅಪ್ಲಿಕೇಶನ್‌ ತುಂಬುವ ವೇಳೆ ಅವರು ಎಡವಟ್ಟು ಮಾಡಿರಬಹುದು. ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ಮಾರ್ಕ್ಸ್‌ ಕಾರ್ಡ್‌ನಲ್ಲಿ ವಿದ್ಯಾರ್ಥಿಯ ಫೋಟೋ ಬರುವಂತೆ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತದೆ ಎಂದು ಪ್ರಾಂಶುಪಾಲ ಜಿ. ಮಿಶ್ರಾ ಹೇಳಿದ್ದಾರೆ.

ಕಳೆದ ತಿಂಗಳು ಮಹಿಳೆಯೋರ್ವಳ ಮತದಾರರ ಗುರುತು ಚೀಟಿಯಲ್ಲಿ ಬಾಲಿವುಡ್‌ ನಟಿ ಸನ್ನಿ ಲಿಯೋನ್ ಚಿತ್ರ ಪ್ರಿಂಟ್‌ ಆಗಿದೆ. 51 ವರ್ಷದ ಮಹಿಳೆಯ ಫೋಟೋ ಬದಲಿಗೆ ಸನ್ನಿ ಲಿಯೋನ್ ಫೋಟೋ ಹಾಕಲಾಗಿತ್ತು. ಬಳಿಕ ಅದನ್ನು ಪರಿಶೀಲನೆ ವೇಳೆ ಸರಿಪಡಿಸಲಾಗಿತ್ತು. ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ಹಾಗೂ ಅಖಿಲೇಶ್‌ ಯಾದವ್‌ ಸರಕಾರದಲ್ಲಿ ಮಂತ್ರಿಯಾಗಿದ್ದ ನರದ್‌ ರೈ ಅವರ ವೋಟರ್‌ ಐಡಿಯಲ್ಲಿ ಆನೆಯ ಚಿತ್ರ ಮುದ್ರಣವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...