alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆ ನಡೆಸುತ್ತಿದ್ದ ನೃತ್ಯ ನಿರ್ದೇಶಕಿ ಅರೆಸ್ಟ್

ಬಾಲಿವುಡ್ ಚಿತ್ರಗಳ ನೃತ್ಯ ನಿರ್ದೇಶಕಿ ಆಗ್ನೇಸ್ ಹ್ಯಾಮಿಲ್ಟನ್ ಅವರನ್ನು ಮುಂಬೈ ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಅಂತರಾಷ್ಟ್ರೀಯ ವೇಶ್ಯಾವಾಟಿಕೆ ಜಾಲದಲ್ಲಿ ಇವರ ಪಾತ್ರ ಇದೆ ಎಂಬ ಆರೋಪ ಹೊರಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಯುವತಿಯರನ್ನು ನೃತ್ಯ ಕಾರ್ಯಕ್ರಮದ ನೆಪದಲ್ಲಿ ವಿದೇಶಕ್ಕೆ ಕಳಿಸಿ ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರೆನ್ನಲಾಗಿದೆ.

ಆಕೆಯ ಫೇಸ್ ಬುಕ್ ನಲ್ಲಿ ವಿವಿಧ ಬಾಲಿವುಡ್ ನಟರೊಂದಿಗೆ ಕೆಲಸ ಮಾಡಿರುವ ಚಿತ್ರಗಳನ್ನು ಹಾಕಿಕೊಂಡಿರುವುದು ಕಂಡುಬಂದಿದೆ.

ಈಕೆ ವಿರುದ್ಧ ಇದೀಗ ಮಾನವ ಸಾಗಣೆ ಆರೋಪದ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಮಲೇಷ್ಯಾ ಮತ್ತು ಭಾರತದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದು, ಇತ್ತೀಚೆಗಷ್ಟೇ ಪ್ರಕರಣ ಬೆಳಕಿಗೆ ಬಂದಿತ್ತು. ಕೀನ್ಯಾ ಸರ್ಕಾರ ಮಾನವ ಸಾಗಣೆ ವಿಚಾರವಾಗಿ ಒಬ್ಬ ಮಹಿಳೆಯನ್ನು ಬಂಧಿಸಿದ್ದಾಗ ಆಗ್ನೇಸ್ ವಿಚಾರ ಬಹಿರಂಗವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...