alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ನಿಂದಾಗಿ ಬೀದಿಗೆ ಬಿದ್ದ ಬಾಲಿವುಡ್ ನಟಿ

ent alisaಬಾಲಿವುಡ್ ನಟಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಕಾರಣಕ್ಕಾಗಿ ಈಗ ಬೀದಿಗೆ ಬಿದ್ದಿದ್ದಾಳೆ. ಬಾಯ್ ಫ್ರೆಂಡ್ ಜೊತೆಗಿನ ಆಕೆಯ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗಿರುವ ಕಾರಣಕ್ಕೆ ಪೋಷಕರು ನಟಿಯನ್ನು ಮನೆಯಿಂದ ಹೊರ ಹಾಕಿದ್ದಾರೆನ್ನಲಾಗಿದೆ.

ಖ್ಯಾತ ಬಾಲಿವುಡ್ ನಟ ಇಮ್ರಾನ್ ಹಶ್ಮಿಯವರ ತೆರೆ ಕಾಣಬೇಕಾದ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಆಲಿಶಾ ಇಂತಹ ಪರಿಸ್ಥಿತಿಯನ್ನೆದುರಿಸುತ್ತಿದ್ದಾಳೆನ್ನಲಾಗಿದ್ದು, ಗ್ರೇಟರ್ ಕೈಲಾಶ್ ನಲ್ಲಿದ್ದ ಆಕೆಯನ್ನು ಸ್ನೇಹಿತರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆಂದು ಹೇಳಲಾಗಿದೆ.

ಆಲಿಶಾ ತನ್ನ ಬಾಯ್ ಫ್ರೆಂಡ್ ಜೊತೆಗಿದ್ದ ವೇಳೆ ಆತ ಅತ್ಮೀಯ ಕ್ಷಣಗಳನ್ನು ಸೆರೆ ಹಿಡಿದಿದ್ದು, ಇದೀಗ ಇಬ್ಬರ ನಡುವೆ ಬ್ರೇಕ್ ಅಪ್ ಆಗಿರುವ ಕಾರಣ ಬೇಕೆಂದೇ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಿದ್ದನೆನ್ನಲಾಗಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಆಕೆಯ ಪೋಷಕರು ಮನೆಯಿಂದ ಹೊರ ಹಾಕಿದ್ದು, ಇದೀಗ ಆಲಿಶಾ ತನ್ನ ಮಾಜಿ ಬಾಯ್ ಫ್ರೆಂಡ್ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾಳೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...