alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ಪಾನ್ ನಂಬರ್ ಬಳಸಿ ನಡೆಯುತ್ತಿದೆ ಮೋಸ

ನಮ್ಮ ಪಾನ್ ಕಾರ್ಡ್ ನಂಬರ್ ಬಳಸಿ ಎಷ್ಟು ದೊಡ್ಡ ಮೋಸ ಮಾಡಬಹುದು ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂಥಹ ಮೋಸದ ಪ್ರಕರಣವೊಂದು ಬಹಿರಂಗವಾಗಿದೆ. ಸಾಮಾನ್ಯ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬನ ಪಾನ್ ಕಾರ್ಡ್ ಬಳಸಿಕೊಂಡು ಮೋಸ ಮಾಡಲಾಗಿದೆ.

ದೆಹಲಿಯ 27 ವರ್ಷದ ಅನುಜ್ ಕುಮಾರ್ ಗೆ ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಬರುತ್ತದೆ. ಆದ್ರೆ ಜನವರಿಯಲ್ಲಿ ಆದಾಯ ತೆರಿಗೆ ಇಲಾಖೆ ನೀಡಿದ ನೊಟೀಸ್, ಅನುಜ್ ಕುಮಾರ್ ದಂಗು ಬಡಿಸಿತ್ತು. ಅದ್ರಲ್ಲಿ 13 ಕಂಪನಿಗಳ ನಿರ್ದೇಶಕನೆಂದು ನಮೂದಿಸಲಾಗಿತ್ತು. ಜೊತೆಗೆ 20 ಕೋಟಿಗೂ ಹೆಚ್ಚು ವ್ಯವಹಾರ ನಡೆಸುತ್ತಿದ್ದಾನೆಂದಿತ್ತು.

ನೊಟೀಸ್ ನಂತ್ರ ಅನುಜ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದ. ನನ್ನ ಪಾನ್ ಕಾರ್ಡ್ ದುರ್ಬಳಕೆಯಾಗಿದೆ ಎಂದು ದೂರಿನಲ್ಲಿ ಹೇಳಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಸೆಪ್ಟೆಂಬರ್ 1ರೊಳಗೆ ಅಂತಿಮ ವರದಿ ನೀಡುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.

ಪೊಲೀಸ್ ವರದಿ ನಂತ್ರ ತೆರಿಗೆ ಇಲಾಖೆ ತನ್ನ ತಪ್ಪು ತಿದ್ದಿಕೊಳ್ಳಲಿದೆ ಎಂಬ ಭರವಸೆಯನ್ನು ಅನುಜ್ ಹೊಂದಿದ್ದಾನೆ. ತನ್ನ ಸಂಬಳಕ್ಕೆ ಯಾವುದೇ ಬ್ಯಾಂಕ್ 5 ಲಕ್ಷದವರೆಗೆ ಸಾಲ ನೀಡುವುದಿಲ್ಲ. ಇನ್ನು 13 ಕಂಪನಿ ಡೈರೆಕ್ಟರ್ ಆಗಲು ಹೇಗೆ ಸಾಧ್ಯವೆಂದು ಅನುಜ್ ಪ್ರಶ್ನೆ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...