alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದ ಟಾಯ್ಲೆಟ್ ನಲ್ಲಿ ನವಜಾತು ಶಿಶುವಿನ ಶವ ಪತ್ತೆ

ಏರ್ ಏಷ್ಯಾ ವಿಮಾನದ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆ ಆಗಿದೆ. ಇಂಪಾಲ್ ದಿಂದ ದೆಹಲಿಗೆ ಬರುವ ವಿಮಾನದಲ್ಲಿ ಶಿಶುವಿನ ಮೃತದೇಹ ಪತ್ತೆ ಆಗಿದೆ.

ಮಗುವಿನ ಬಾಯಲ್ಲಿ ಶೌಚಾಲಯದಲ್ಲಿ ಬಳಸುವ ಕಾಗದವನ್ನು ತುರುಕಲಾಗಿದೆ. ಈ ಬಗ್ಗೆ ಪ್ರಯಾಣಿಕರ ವಿಚಾರಣೆ ನಡೆಸಿದಾಗ ಇಂಪಾಲ್ ನಿಂದ ಬಂದ ಅವಿವಾಹಿತ ಯುವತಿ ಈ ಕೃತ್ಯ ಎಸಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಮಹಿಳಾ ಪ್ರಯಾಣಿಕರ ವಿಚಾರಣೆ ನಡೆಸಿದ್ದಾರೆ.

ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಮಾನ ಸಿಬ್ಬಂದಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವೈದ್ಯರು ಸ್ಥಳಕ್ಕೆ ಬಂದು ಪರಿಶೀಲಿಸಿ, ಮಗು ಸಾವನ್ನಪ್ಪಿದ ಬಗ್ಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...