alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಪ್ರಯಾಣಿಸ್ತೀರಾ? ಹಾಗಿದ್ರೆ ತಪ್ಪದೇ ಓದಿ ಈ ಸುದ್ದಿ

ಚಲಿಸುತ್ತಿರುವ ರೈಲಿನಿಂದ ಇಳಿಯುವುದು ಹಾಗೂ ಹತ್ತುವುದು ಅಪರಾಧ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ಅಪಘಾತದಲ್ಲಿ ಕಾಲು ಕಳೆದುಕೊಂಡ ವ್ಯಕ್ತಿಗೆ ಪರಿಹಾರ ನೀಡಲು ನಿರಾಕರಿಸಿದೆ.

ಚಲಿಸುವ ರೈಲಿನಿಂದ ಹತ್ತುವುದು, ಇಳಿಯುವುದರಿಂದ ಆದ ಅವಘಡಗಳಿಗೆ ಪರಿಹಾರ ನೀಡಲು ಆಗದು. ಆದ್ರೆ, ಸಹ ಪ್ರಯಾಣಿಕರಿಂದ ಇನ್ನೋರ್ವ ಪ್ರಯಾಣಿಕರಿಗೆ ಗಾಯವಾದ್ರೆ ಶಿಕ್ಷಾರ್ಹ ಅಪರಾಧವಾಗಿದೆ. ರೈಲ್ವೆ ಕಾನೂನಿನ್ವಯ ಗಾಯಕ್ಕೆ ತುತ್ತಾದ ವ್ಯಕ್ತಿಗೆ ಪರಿಹಾರ ನೀಡಲಾಗುವುದು ಎಂದು ಕೋರ್ಟ್ ತಿಳಿಸಿದೆ.

ಮೇ 27, 2014 ರಲ್ಲಿ ಕಲುಪೂರ್ ರೈಲ್ವೆ ನಿಲ್ದಾಣದಲ್ಲಿ ಪ್ರವೀಣ್ ಭಾಯ್ ವಘೇಲಾ, ಸಮಯ ಉಳಿಸಲು ಮಾಡಿದ ಎಡವಟ್ಟು ಜೀವಕ್ಕೆ ಕುತ್ತು ತಂದಿದೆ. ಪ್ರವೀಣ್, ಪ್ಯಾಸೆಂಜರ್ ಟ್ರೇನ್ ನಲ್ಲಿ ಪ್ರಯಾಣ ಮಾಡ್ತಾ ಇದ್ದರು. ಅದೇ ವೇಳೆ ವಡೋದರಾ ಇಂಟರ್ಸಿಟಿ ಎಕ್ಸ್ ಪ್ರೆಸ್, ನಿಧಾನವಾಗಿ ಹೋಗ್ತಾ ಇತ್ತು. ಇದನ್ನು ಗಮನಿಸಿದ ಪ್ರವೀಣ್, ವಡೋದರಾ ಇಂಟರ್ಸಿಟಿ ಎಕ್ಸ್ ಪ್ರೆಸ್ ಹತ್ತಿದ್ರೆ, ಬೇಗ ಕಚೇರಿ ಮುಟ್ಟಬಹುದು ಎಂಬ ಉದ್ದೇಶದಿಂದ, ಒಂದು ರೈಲಿನಿಂದ ಮತ್ತೊಂದು ರೈಲಿಗೆ ಹತ್ತಲು ಚಲಿಸುತ್ತಿರುವಾಗಲೇ ಇಳಿದಿದ್ದಾರೆ. ಈ ವೇಳೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ಪರಿಣಾಮ ಕಾಲು ಕಳೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...