alex Certify
ಕನ್ನಡ ದುನಿಯಾ       Mobile App
       

Kannada Duniya

BMW ಕಾರ್ ಗಿಫ್ಟ್ ಕೊಟ್ಟವರ್ಯಾರು ಗೊತ್ತಾ ?

SACHIN MONEYಮೊನ್ನೆಯಷ್ಟೆ ರಿಯೋ ಒಲಿಂಪಿಕ್ಸ್ ನಲ್ಲಿ ಸಾಧನೆ ಮಾಡಿದ ಭಾರತದ ಕ್ರೀಡಾಪಟುಗಳು ಹಾಗೂ ಕೋಚ್ ಪುಲ್ಲೇಲಾ ಗೋಪಿಚಂದ್ ಅವರಿಗೆ BMW ಕಾರು ಕೊಟ್ಟು ಗೌರವಿಸಲಾಯ್ತು.

ಕ್ರೀಡಾ ಸಾಧಕರಿಗೆಲ್ಲ ಕಾರಿನ ಕೀಲಿ ಕೊಟ್ಟು ಸನ್ಮಾನಿಸಿದವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಹಾಗಾಗಿ ಈ ಕೊಡುಗೆ ಸಚಿನ್ ಅವರದ್ದು ಅಂತಾನೇ ಬಹುತೇಕರ ಭಾವನೆ. ಆದ್ರೆ ಈ BMW ಕಾರ್ ಗಳಿಗೆ ಹಣ ಕೊಟ್ಟವರು ಸಚಿನ್ ಅಲ್ಲ. ಹೈದ್ರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಅಧ್ಯಕ್ಷ ಚಾಮುಂಡೇಶ್ವರಿನಾಥ್.

ಇವರು ಕೂಡ ಮಾಜಿ ಕ್ರಿಕೆಟ್ ಆಟಗಾರ, ಸಚಿನ್ ಅವರ ಖಾಸಾ ದೋಸ್ತ್. ಹಾಗಾಗಿ ತೆಂಡೂಲ್ಕರ್ ಅವರ ಕೈಯ್ಯಲ್ಲೇ ಉಡುಗೊರೆಯನ್ನು ಆಟಗಾರರಿಗೆ ಕೊಡಮಾಡಿಸಿದ್ದಾರೆ. 2012 ರಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ನೆಹ್ವಾಲ್ ಗೆ ಕೂಡ BMW ಕಾರ್ ಗಿಫ್ಟ್ ಕೊಟ್ಟಿದ್ದರು. ಆಗ ಕೂಡ ಸಚಿನ್ ತಮ್ಮ ಸ್ವಂತ ಹಣದಿಂದ ಕಾರು ಖರೀದಿಸಿ ಕೊಟ್ಟಿದ್ದಾರೆಂದೇ ಎಲ್ಲರೂ ನಂಬಿದ್ದರು. ಆದ್ರೆ ಅದಕ್ಕೂ ಹಣ ಕೊಟ್ಟವರು ಚಾಮುಂಡೇಶ್ವರಿನಾಥ್ ಅವರೇ. ಇದುವರೆಗೆ 13 ಕ್ರೀಡಾಪಟುಗಳಿಗೆ ಚಾಮುಂಡೇಶ್ವರಿನಾಥ್ BMW ಕಾರ್ ಕೊಟ್ಟು ಸನ್ಮಾನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...