alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಮನೆಯಲ್ಲಿತ್ತು ನಕಲಿ ಕ್ರೆಡಿಟ್ ಕಾರ್ಡ್ ಫ್ಯಾಕ್ಟರಿ

benga

ಅಹಮದಾಬಾದ್: ಮನೆಯೊಂದರಲ್ಲಿ ಅಕ್ರಮವಾಗಿ ಕ್ರೆಡಿಟ್ ಕಾರ್ಡ್ ತಯಾರಿಸಿ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ದಂಪತಿ ಮನೆಯಲ್ಲಿಯೇ ವ್ಯವಸ್ಥಿತವಾಗಿ ನಕಲಿ ಕ್ರೆಡಿಟ್ ಕಾರ್ಡ್ ತಯಾರಿಸುತ್ತಿದ್ದರು.

ಮನೋಜ್ ಕುಮಾರ್ ಅಲಿಯಾಸ್ ರಾಜಶೇಖರ್ ಹಾಗೂ ನೀತಾ ದಂಪತಿ ಅಹಮದಾಬಾದ್ ನ ಪ್ರತಿಷ್ಠಿತ ಬಡಾವಣೆಯಲ್ಲಿ ಡುಪ್ಲೆಕ್ಸ್ ಮನೆ, ಐಷಾರಾಮಿ ಕಾರು ಹೊಂದಿ ಹೈಫೈ ಜೀವನ ನಡೆಸುತ್ತಿದ್ದು, ಇವರ ವರ್ತನೆ ಬಗ್ಗೆ ಅನುಮಾನಗೊಂಡ ಪೊಲೀಸರು, ವಿಚಾರಣೆ ನಡೆಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ. ಮನೋಜ್ ಕುಮಾರ್ ಗೆ ಮಲೇಷಿಯಾ, ಮುಂಬೈ, ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಗಳಿದ್ದಾರೆ. ಅಹಮದಾಬಾದ್ ನಲ್ಲಿ ಪತ್ನಿ ನೀತಾ ಜೊತೆಗಿದ್ದ ಮನೋಜ್ ಮನೆಯಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ತಯಾರಿಸುತ್ತಿದ್ದ.

ಆತನ ಕೃತ್ಯಕ್ಕೆ ಪತ್ನಿ ಸಾಥ್ ಕೊಡುತ್ತಿದ್ದಳು. ಮನೆಯಲ್ಲಿ ವ್ಯವಸ್ಥಿತವಾಗಿ ನಕಲಿ ಕಾರ್ಡ್ ಗಳನ್ನು ತಯಾರಿಸಿ ವಂಚಿಸುತ್ತಿದ್ದರು. ಅವರ ಮನೆಯಲ್ಲಿ 1 ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಪ್ರಿಂಟರ್, 1 ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ರೀಡರ್ ಮತ್ತು ರೈಟರ್, 2 ಕಾರ್ಡ್ ಎಂಬೋಸಿಂಗ್ ಯಂತ್ರಗಳು, 1 ಸಿಮ್ ಕಾರ್ಡ್ ಇಮೇಜಿಂಗ್ ಯಂತ್ರ, 1 ಥರ್ಮಲ್ ಪ್ರಿಂಟಿಂಗ್ ರೋಲ್, 3 ಫೋನ್, 2 ಮಾಡೆಮ್, 1 ಲೆನೋವಾ ಐಪ್ಯಾಡ್, 6 ಬ್ಯಾಂಕ್ ಪಾಸ್ ಬುಕ್, 9 ಕ್ರೆಡಿಟ್/ಡೆಬಿಟ್ ಕಾರ್ಡ್, 16 ಚೆಕ್ ಬುಕ್, ಆಡಿ ಕ್ಯೂ7 ಹಾಗೂ ಫೋರ್ಡ್ ಎಕೊಸ್ಪೋರ್ಟ್ ಕಾರ್ ಗಳು, ವೀಸಾ/ಮಾಸ್ಟರ್ ಕಾರ್ಡ್ ಹಾಲೋಗ್ರಾಮ್ಸ್, 22 ಇಡಿಸಿ, 23 ಫೋರ್ಟೆಬಲ್ ಇಡಿಸಿ ಮಿಷಿನ್, 2752 ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ಕ್ಯಾನ್ಸ್ ಡಿಟೇಲ್ಸ್ ವಶಪಡಿಸಿಕೊಳ್ಳಲಾಗಿದೆ.

ಇವರು ಸ್ವೈಪ್ ಯಂತ್ರದಲ್ಲಿ ಸಂಗ್ರಹವಾದ ಡಿಟೇಲ್ ಆಧರಿಸಿ ನಕಲಿ ಕಾರ್ಡ್ ತಯಾರಿಸುತ್ತಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ, ನೀತಾ ಹಾಗೂ ಸಹಾಯಕ ಕಿರಣ್ ಅವರನ್ನು ಬಂಧಿಸಿದ್ದಾರೆ. ಆರೋಪಿ ಮನೋಜ್ ಕುಮಾರ್ ತಲೆಮರೆಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...