alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲಿ ಗ್ಯಾಂಗ್ ವಾರ್, ಸಾರ್ವಜನಿಕರ ಎದುರೇ ಬರ್ಬರ ಕೃತ್ಯ

ದೆಹಲಿಯ ಪೀತಂಪುರದಲ್ಲಿ 27 ವರ್ಷದ ವ್ಯಕ್ತಿಯೊಬ್ಬ ಗ್ಯಾಂಗ್ ವಾರ್ ಗೆ ಬಲಿಯಾಗಿದ್ದಾನೆ. ಸಾರ್ವಜನಿಕರ ಎದುರಲ್ಲೇ ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಲಾಗಿದೆ. ರೌಡಿ ಜೀತೇಂದರ್ ಗೋಗಿ ಹಾಗೂ ಸುನಿಲ್ ಟಿಲ್ಲು ಗ್ಯಾಂಗ್ ನಡುವಣ ವೈಷಮ್ಯಕ್ಕೆ ಈ ನೆತ್ತರು ಹರಿದಿದೆ.

ಮೋನು ಮನ್ ಅಲಿಯಾಸ್ ಪವನ್ ಕೊಲೆಯಾದ ವ್ಯಕ್ತಿ. ಪ್ರಕರಣವೊಂದರ ವಿಚಾರಣೆಗಾಗಿ ಸ್ವಿಫ್ಟ್ ಕಾರಿನಲ್ಲಿ ಗೆಳೆಯ ದಿಗ್ವಿಜಯ್ ಜೊತೆಗೆ ಆತ ರೋಹಿಣಿ ಕೋರ್ಟ್ ಗೆ ಬಂದಿದ್ದ. 2014ರಲ್ಲಿ ನಡೆದ ಕೊಲೆ ಯತ್ನ ಪ್ರಕರಣವೊಂದರ ಆರೋಪಿ ಈತ.

ಕೋರ್ಟ್ ನಿಂದ ವಾಪಸ್ ಬರುವಾಗ ಏನಾದ್ರೂ ತಿನ್ನೋಣ ಅಂತಾ ಗಾಡಿ ನಿಲ್ಲಿಸಿ ಕೆಳಕ್ಕಿಳಿದಿದ್ದಾರೆ. ನಾನ್ ಹಾಗೂ ಕುಲ್ಚಾ ಆರ್ಡರ್ ಮಾಡಿ ಇಬ್ಬರೂ ಕುಳಿತಿದ್ರು. ಈ ವೇಳೆ ಮೋಟರ್ ಸೈಕಲ್ ನಲ್ಲಿ ಇಬ್ಬರು ತಮ್ಮನ್ನೇ ಗಮನಿಸುತ್ತಿರೋದು ಮೋನು ಗಮನಕ್ಕೆ ಬಂದಿದೆ.

ಕೋರ್ಟ್ ಗೂ ಅವರು ಹಿಂಬಾಲಿಸಿ ಬಂದಿದ್ರು. ಆದ್ರೆ ಇನ್ನಿಬ್ಬರು ಕಾರ್ ನಲ್ಲೂ ತಮ್ಮನ್ನು ಫಾಲೋ ಮಾಡ್ತಿರೋದು ಮೋನು ಹಾಗೂ ದಿಗ್ವಿಜಯ್ ಗೆ ತಿಳಿದಿರಲಿಲ್ಲ. ಮೋನು ಅಲ್ಲಿಂದ ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ, ಈ ವೇಳೆ ಕಾರಿನಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು, ಸುಮಾರು 14 ಬಾರಿ ಗುಂಡು ಹಾರಿಸಿದ್ದಾರೆ.

10 ಗುಂಡುಗಳು ಮೋನು ದೇಹ ಸೇರಿವೆ, ಒಂದು ಗುಂಡು ಅಂಗಡಿ ಮಾಲೀಕನಿಗೆ ತಗುಲಿದೆ. ಮೋನು ಉಸಿರಾಟ ನಿಂತಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಂಡು ಹಂತಕರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಗಾಯಗೊಂಡಿರೋ ಅಂಗಡಿ ಮಾಲೀಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...