alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಚಲಿಸುತ್ತಿದ್ದ ರೈಲಿನ ಮೇಲಿಂದ ಸುರಿಯುತ್ತಿತ್ತು ರಕ್ತ

ದೆಹಲಿ-ಹೈದ್ರಾಬಾದ್ ತೆಲಂಗಾಣ ನಡುವಿನ ಎಕ್ಸ್ಪ್ರೆಸ್ ರೈಲು ಪ್ರಯಾಣಿಕರಿಗೆ ವಿಚಿತ್ರ ಅನುಭವಾದ ಘಟನೆ ನಡೆದಿದೆ. ಬೋಗಿಯ ಮೇಲಿಂದ ರಕ್ತ ಸುರಿಯುತ್ತಿರುವುದನ್ನ ಪ್ರಯಾಣಿಕರು ಗಮನಿಸಿದ್ದಾರೆ.

ಕೂಡಲೇ ವಿಚಾರವನ್ನು ರೈಲ್ವೆ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಜಾನ್ಸಿಯಿಂದ ಹೊರಟ ರೈಲಿನ ಎರಡು ಎಸಿ ಬೋಗಿಗಳ ನಡುವೆ ರಕ್ತ ಸುರಿಯುತ್ತಿರುವುದನ್ನ ಪ್ರಯಾಣಿಕರು ಗಮನಿಸಿದ್ದಾರೆ. ಕೂಡಲೇ ಲಲಿತ್ ಪುರ ಸ್ಟೇಷನ್ ನಲ್ಲಿ ರೈಲು ನಿಲ್ಲಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ವ್ಯಕ್ತಿಯ ರಕ್ತಸಿಕ್ತ ಮೃತದೇಹವೊಂದು ಪತ್ತೆಯಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ ಸಿಕ್ಕಿರುವ ಮೃತದೇಹದ ಗುರುತು ಪತ್ತೆ ಕಾರ್ಯ ಕಷ್ಟವಾಗಿದೆ. ಮುಖ ಗುರುತು ಸಿಗಲಾರದಂತಾಗಿದೆ. ಮೃತದೇಹದ ಕೈಮೇಲೆ ಇರುವ ಎರಡು 786 ಮತ್ತು ಮೊಹಮ್ಮದ್ ಸರ್ತಾಜ್ ಎಂಬ ಟ್ಯಾಟೂಗಳ ಮೂಲಕವೇ ಈಗ ಪೊಲೀಸರು ಪ್ರಕರಣವನ್ನು ಪತ್ತೆ ಹಚ್ಚೋಕೆ ಶುರುಮಾಡಿದ್ದಾರೆ.

ಈ ಘಟನೆಗೆ ಪೂರಕ ಎಂಬಂತೆ ಧರ್ಮವೀರ್ ಎಂಬ ಪ್ರಯಾಣಿಕರು ರೈಲಿನಲ್ಲಿ ಕೆಲವು ಮಂದಿ ಗನ್ ತೋರಿಸಿ ದರೋಡೆಗೆ ಯತ್ನಿಸಿದರು ಅಂತ ರೈಲ್ವೆ ಪೊಲೀಸರಿಗೆ ದೂರು ದಾಖಲು ಮಾಡಿದ್ದರು. ಈ ಸಂಬಂಧ ರೈಲಿನಲ್ಲಿರುವ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚೋಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಧರ್ಮವೀರ್, ರೈಲು ಬೋಗಿಯ ಮೇಲಿಂದ ರಕ್ತ ಸುರಿಯುತ್ತಿರೋದನ್ನ ಪೊಲೀಸರ ಗಮನಕ್ಕೆ ತಂದಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತನ ಸಂಬಂಧಿಕರ ಪತ್ತೆಗೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...