alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಬಳಕೆಗೆ ನಿಷೇಧ ಹೇರುತ್ತಾ ಸರ್ಕಾರ…?

ಅದ್ಯಾಕೊ ಏನೋ ಕೇಂದ್ರ ಸರ್ಕಾರ ವಾಟ್ಸಾಪ್ ಮೇಲೆ ಮುನಿಸಿಕೊಂಡಿರುವಂತೆ ಕಾಣುತ್ತಿದೆ. ಕಳ್ಳತನ, ಕೊಲೆ ಮತ್ತಿತರೆ ಸುಳ್ಳು ಸುದ್ದಿಗಳನ್ನ ಕ್ಷಿಪ್ರವಾಗಿ ಹರಡುವಂತಾ ಆಪ್ ಗಳ ಮೇಲೆ ನಿಷೇಧ ಹೇರೋದಕ್ಕೆ ಭಾರತದ ದೂರ ಸಂಪರ್ಕ ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಟೆಲಿಕಾಂ ಸಂಸ್ಥೆಗಳು ಮತ್ತು ಆಪರೇಟರ್ ಗಳಿಗೂ ಸರ್ಕಾರ ಬಿಸಿ ಮುಟ್ಟಿಸೋಕೆ ಚಿಂತನೆ ನಡೆಸಿದೆ.

ಕೇವಲ ಆಪ್ ಗಳನ್ನ ಬ್ಲಾಕ್ ಮಾಡೋದಷ್ಟೇ ಅಲ್ಲ. ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ನಂತಾ ಆಪ್ ಗಳಿಗೆ ನೀಡಲಾಗಿರುವ ತರಂಗಾಂತರಗಳನ್ನೇ ಹಿಂಪಡೆಯೋಕೆ ಭಾರತೀಯ ದೂರ ಸಂಪರ್ಕ ಇಲಾಖೆ ಚಿಂತನೆ ನಡೆಸುತ್ತಿದೆ.

ವಾಟ್ಸಾಪ್ ನಲ್ಲಿ ಬಹುಬೇಗನೆ ಸುಳ್ಳು ಸುದ್ದಿ, ಮತ್ತು ಗುಂಪು ಘರ್ಷಣೆಗೆ ಪ್ರೇರಣೆ ನೀಡುವಂತಾ ಸುದ್ದಿಗಳು ಹೆಚ್ಚು ಪ್ರಸಾರವಾಗುತ್ತಿವೆ. ಇಂತಾ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಾಟ್ಸಾಪ್ ಸೇವಾ ಸಂಸ್ಥೆ ತಲೆಕೆಡಿಸಿಕೊಳ್ತಿಲ್ಲ. ಹಾಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 69ಎ ಅಡಿಯಲ್ಲಿ ಆಪ್ ಗಳ ಬಳಕೆಯ ಮೇಲೆ ನಿರ್ಬಂಧ ಹೇರೋದಕ್ಕೆ ಭಾರತೀಯ ದೂರ ಸಂಪರ್ಕ ಸಚಿವಾಲಯ ಚಿಂತನೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...