alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಬಲ ಬಾಂಬ್ ಸ್ಪೋಟಕ್ಕೆ ಮೂವರು ಸಹೋದರರ ಬಲಿ

ಕರ್ನೂಲ್ ಜಿಲ್ಲೆಯ ನಂದ್ಯಾಲ್ ಚೆಕ್‌ಪೋಸ್ಟ್‌ ಬಳಿಯ ರಿಯಲ್‌ ಎಸ್ಟೇಟ್‌ ಸೈಟ್‌ ಒಂದರಲ್ಲಿ ಪ್ರಬಲ ಬಾಂಬ್‌ ಸ್ಪೋಟಗೊಂಡಿದೆ. ಘಟನೆಯಲ್ಲಿ ಮೂವರು ಸಹೋದರ ಉದ್ಯಮಿಗಳು ಮೃತಪಟ್ಟಿದ್ದಾರೆ. ಮಲ್ಲಿಕಾರ್ಜುನ್‌, ರಾಜಶೇಖರ್‌ ಹಾಗೂ ಶ್ರೀನಿವಾಸುಲು ಬಾಂಬ್‌ ಸ್ಫೋಟಕ್ಕೆ ಬಲಿಯಾದವರು.

ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ಮಲ್ಲಿಕಾರ್ಜುನ್‌ ಹಾಗೂ ರಾಜಶೇಖರ್‌ ಸಹೋದರರು ತಮ್ಮ ಸೋದರ ಸಂಬಂಧಿ ಶ್ರೀನಿವಾಸಲು ಜೊತೆಗೆ ಹೊಸ ಸೈಟ್‌ ವೀಕ್ಷಣೆಗೆ ಹೋಗಿದ್ದಾರೆ.

ಯೋಜನೆ ಆರಂಭಕ್ಕೆ ಮುನ್ನ ಸ್ಥಳಕ್ಕೆ ಬಂದು, ಕೆಲಸಗಾರರಿಂದ ಸ್ವಚ್ಛಗೊಳಿಸಿದ್ದಾರೆ. ಈ ವೇಳೆ ಪ್ರಬಲ ಬಾಂಬ್‌ ಸ್ಪೋಟಗೊಂಡು ಮಲ್ಲಿಕಾರ್ಜುನ್‌ ಹಾಗೂ ರಾಜಶೇಖರ್‌ ಸ್ಥಳದಲ್ಲೇ ಮೃತಪಟ್ಟರೆ, ಶ್ರೀನಿವಾಸುಲು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಾಹನ ಚಾಲಕ ಸುಧಾಕರ್‌ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಈ ಉದ್ಯಮಿಗಳು ನಗರದ ವಿವಿಧ ಭಾಗಗಳಲ್ಲಿ ಹಲವಾರು ವಸತಿ ಸಮುಚ್ಚಯಗಳನ್ನು ನಿರ್ಮಿಸಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...