alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಡ್ರೈವರ್ ಸಾವಿನ ರಹಸ್ಯ

velluru

ತಮಿಳುನಾಡಿನ ವೆಲ್ಲೂರಿನಲ್ಲಿ ಜಿಲೆಟಿನ್ ಸ್ಪೋಟದಿಂದ ಚಾಲಕರೊಬ್ಬರು ಮೃತಪಟ್ಟಿದ್ದರೆಂದು ಹೇಳಲಾಗಿತ್ತಾದರೂ ಇದೀಗ ಅವರ ಸಾವಿನ ರಹಸ್ಯ ಬಯಲಾಗಿದೆ. ಅವರು ಉಲ್ಕಾಪಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವೆಲ್ಲೂರಿನ ನಟ್ರಪಲ್ಲಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜ್ ಬಸ್ ಚಾಲಕ ಕಾಮರಾಜ್ ಮೃತಪಟ್ಟವರು.

ಕಾಲೇಜ್ ಆವರಣದಲ್ಲಿ ಬಸ್ ನಲ್ಲಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದ ಸ್ಪೋಟ ಉಂಟಾಗಿ ಅವರು ಮೃತಪಟ್ಟಿದ್ದರು. ಘಟನೆಯ ಸ್ಥಳದಲ್ಲಿ ಬಾಂಬ್ ಸ್ಪೋಟವಾದಾಗ ಉಂಟಾಗುವ ಪರಿಣಾಮದ ಹೇಗಿರುತ್ತದೆಯೋ ಅದೇ ರೀತಿ ಇತ್ತು. ಕಾಲೇಜ್ ನಿರ್ಮಾಣದ ಸಂದರ್ಭದಲ್ಲಿ ಬಳಸಿದ್ದ ಜಿಲೆಟಿನ್ ಕಡ್ಡಿಗಳನ್ನು ಕಸದ ಜೊತೆಗೆ ಹಾಕಿ ಕೆಲಸಗಾರರು ಬೆಂಕಿ ಹಚ್ಚಿದ್ದು, ಅವು ಸ್ಪೋಟಗೊಂಡು ಈ ದುರಂತ ಸಂಭವಿಸಿರಬಹುದೆಂದು ಶಂಕಿಸಲಾಗಿತ್ತು. ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಕೂಡ ಪರಿಶೀಲನೆ ನಡೆಸಿದ್ದರು.

ಬಾಂಬ್ ಸ್ಪೋಟ ಸಂಭವಿಸುವ ಸಂದರ್ಭದಲ್ಲಿ ಆಕಾಶದಿಂದ ಭಾರಿ ವಸ್ತುವೊಂದು ಉರಿಯುತ್ತ ಬೀಳುವುದನ್ನು ಪ್ರತ್ಯಕ್ಷದರ್ಶಿಗಳು ಕಂಡಿದ್ದು, ಉಲ್ಕಾಪಾತದಿಂದಲೇ ಸ್ಪೋಟ ಉಂಟಾಗಿ ಬಸ್ ಚಾಲಕ ಮೃತಪಟ್ಟಿರಬಹುದೆಂದು ಹೇಳಲಾಗಿದೆ. ಪರಿಶೀಲನೆ ಕಾರ್ಯ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...