alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ವೆಯಾದ 17 ದಿನದಲ್ಲೇ ಸಂಬಂಧ ಕೊನೆಗೊಳಿಸಿದ ಅತ್ತೆ- ಅಳಿಯ

The Bihar Man Who Married His Mom-In-Law Files For Divorce In 17 Days!17 ದಿನಗಳ ಹಿಂದೆ ಬಿಹಾರದಲ್ಲಿ ನಡೆದಿದ್ದ ವಿಲಕ್ಷಣ ವಿವಾಹವೊಂದರ ಪ್ರಕರಣ ನಿಮಗೆ ನೆನಪಿರಬಹುದು. ಮಗಳ ಗಂಡನ ಜೊತೆಯೇ ವಿವಾಹ ಮಾಡಿಕೊಂಡಿದ್ದ ಮಹಿಳೆ ನಡೆಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅದೀಗ ಮತ್ತೊಂದು ಅಂತ್ಯ ಕಾಣುತ್ತಿದೆ.

42 ವರ್ಷದ ಆಶಾದೇವಿ ಎಂಬಾಕೆ ಎರಡು ವರ್ಷಗಳ ಹಿಂದೆ ತನ್ನ ಅಳಿಯ ಸೂರಜ್ ಅನಾರೋಗ್ಯಗೊಂಡ ಹಿನ್ನಲೆಯಲ್ಲಿ ಮಗಳ ಮನೆಗೆ ಬಂದವಳು ಅಳಿಯನನ್ನೇ ಪ್ರೀತಿಸಲು ಆರಂಭಿಸಿದ್ದಳು. ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದ ಬಳಿಕ ಹಿರಿಯರು ತಿಳಿ ಹೇಳಿದರೂ ಕೇಳಲು ತಯಾರಿರಲಿಲ್ಲ.

ಅಂತಿಮವಾಗಿ 17 ದಿನಗಳ ಹಿಂದೆ ತಮ್ಮೆಲ್ಲಾ ಸಂಬಂಧಗಳನ್ನು ಧಿಕ್ಕರಿಸಿ ಇವರಿಬ್ಬರು ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರಲ್ಲದೇ ತಮ್ಮ ವಿವಾಹವನ್ನು ರಿಜಿಸ್ಟರ್ ಕಛೇರಿಯಲ್ಲೂ ನೋಂದಾಯಿಸಿದ್ದರು. ಈಗ ಇಬ್ಬರಿಗೂ ತಾವು ಮಾಡಿದ ತಪ್ಪಿನ ಅರಿವಾಗಿದೆ. ಸೂರಜ್ ತನ್ನ ಪತ್ನಿ ಬಳಿ ಹೋಗಲು ಬಯಸಿದ್ದರೆ ಆಶಾದೇವಿ ಮೊದಲ ಪತಿಯೊಂದಿಗೆ ಸಂಸಾರ ಮುಂದುವರೆಸಲು ಬಯಸಿದ್ದಾಳೆ. 17 ದಿನಗಳ ಕಾಲ ಪತಿ- ಪತ್ನಿಯರಾಗಿದ್ದ ಇವರುಗಳು ಈಗ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...