alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಡಿನಲ್ಲಿ ಸಿಕ್ತು ಅಪರೂಪದ ರಣಹದ್ದು

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಕಾಡಿನಲ್ಲಿ ಅಪರೂಪದ ರಣಹದ್ದೊಂದು ಕಂಡು ಬಂದಿದೆ. ಗಾಯಗೊಂಡ ಸ್ಥಿತಿಯಲ್ಲಿ ಹದ್ದು ಬಿದ್ದಿದ್ದು, ಯಾವುದೋ ಪ್ರಾಣಿ ದಾಳಿಗೆ ಇದು ಒಳಗಾಗಿದೆ ಎಂದು ಶಂಕಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ ದೈತ್ಯ ರಣಹದ್ದೊಂದು ಕಂಡು ಬಂದಿತ್ತು. ಈಗ ಮತ್ತೊಂದು ರಣಹದ್ದು ಕಾಡಿನಲ್ಲಿ ಸಿಕ್ಕಿದೆ. ಗಾಯಗೊಂಡ ಸ್ಥಿತಿಯಲ್ಲಿ ಸಿಕ್ಕಿರುವ ರಣಹದ್ದು ನೋಡಲು ಜನರು ಆಸಕ್ತರಾಗಿದ್ದಾರೆ. ಅನೇಕ ವರ್ಷಗಳಿಂದ ರಣಹದ್ದು ಜನರ ಕಣ್ಣಿಗೆ ಕಾಣಿಸಿರಲಿಲ್ಲ. ರಾಮಾಯಣದ ಜಟಾಯುವಿನಂತಿರುವ ರಣಹದ್ದು ನೋಡಲು ಜನರು ಕಾತರರಾಗಿದ್ದಾರೆ.

ರಣಹದ್ದನ್ನು ಕಾಡಿನಲ್ಲಿ ನೋಡಿದ ಜನರು ಅರಣ್ಯ ಇಲಾಖೆಗೆ ವಿಷ್ಯ ತಿಳಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ರಣಹದ್ದನ್ನು ರಕ್ಷಿಸಿ ಒಂದು ಕೋಣೆಯಲ್ಲಿ ಕೂಡಿ ಹಾಕಿದೆ. ಅರಣ್ಯದಲ್ಲಿರುವ ಅಪರೂಪದ ಪ್ರಾಣಿ, ಪಕ್ಷಿಗಳು ಮನುಷ್ಯನ ಆಸೆಗೆ ಬಲಿಯಾಗ್ತಿವೆ. ಅವುಗಳ ರಕ್ಷಣೆಗಾಗ್ಲಿ, ಮಾನವನ ವಿರುದ್ಧ ಕ್ರಮಕ್ಕಾಗ್ಲಿ ಅರಣ್ಯ ಇಲಾಖೆ ಮುಂದಾಗ್ತಿಲ್ಲವೆಂದು ಪ್ರಾಣಿ ಪ್ರಿಯರು ಕಿಡಿ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...