alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಎಂಒ ನಿರ್ದೇಶನದಂತೆ ನಡೆಯುತ್ತಿದೆ ಐಟಿ ದಾಳಿ

modi-phone

ನೋಟು ನಿಷೇಧದ ನಂತ್ರ ದೇಶದಾದ್ಯಂತ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ, ಸ್ಥಳೀಯ ಪೊಲೀಸ್ ಕಪ್ಪುಹಣವುಳ್ಳವರ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ. ಪ್ರತಿನಿತ್ಯ ಅನೇಕ ಕಡೆ ಕೋಟ್ಯಾಂತರ ರೂಪಾಯಿ ಕಪ್ಪುಹಣವನ್ನು ವಶಕ್ಕೆ ಪಡೆಯಲಾಗ್ತಾ ಇದೆ. ಪ್ರತಿದಿನ ನಡೆಯುತ್ತಿರುವ ದಾಳಿಗೂ ಪ್ರಧಾನ ಮಂತ್ರಿ ಕಛೇರಿಗೂ ಸಂಬಂಧವಿದೆ.

ಪಿಎಂಒ ಆಣತಿಯಂತೆ  ದಾಳಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ 8ರ ನಂತ್ರ ಪ್ರತಿದಿನ ಪಿಎಂಒ ಗೆ 15-20 ದೂರವಾಣಿ ಕರೆ ಬರ್ತಾ ಇದೆ. ಈವರೆಗೆ 600ಕ್ಕೂ ಹೆಚ್ಚು ಫೋನ್ ಕಾಲ್ ಬಂದಿದೆ. ಇದರ ಆಧಾರದ ಮೇಲೆ ಪಿಎಂಒ ತಮಗೆ ಸಂಬಂಧಿಸಿದ ವಿಭಾಗಕ್ಕೆ ಇದರ ಬಗ್ಗೆ ನಿರ್ದೇಶನ ನೀಡ್ತಿದ್ದಾರೆ. ಶೇಕಡಾ 80 ರಷ್ಟು ದಾಳಿಗಳು ಪಿಎಂಒದಿಂದ ಬಂದ ನಿರ್ದೇಶನದ ಮೇಲೆ ನಡೆದಿದೆ. ಅದ್ರಲ್ಲಿ ಶೇಕಡಾ 100ರಷ್ಟು ಯಶಸ್ಸು ಸಿಕ್ಕಿದೆ.

ನೋಟು ನಿಷೇಧದ ನಂತ್ರ ಕಪ್ಪುಹಣದ ಬಗ್ಗೆ ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ಸಹಾಯವಾಣಿ ಕೂಡ ಶುರುಮಾಡಿದೆ. ಆದ್ರೆ ಇದ್ರ ಮೂಲಕ ಮಾಹಿತಿ ನೀಡಲು ಜನರು ಹಿಂದುಮುಂದು ನೋಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...