alex Certify
ಕನ್ನಡ ದುನಿಯಾ       Mobile App
       

Kannada Duniya

ವಾಮಾಚಾರದಲ್ಲೂ ವೈಷಮ್ಯ-ದ್ವೇಷಕ್ಕೆ ಬಲಿಯಾಯ್ತು ಇಡೀ ಕುಟುಂಬ

ವಾಮಾಚಾರಕ್ಕೆ ಸಂಬಂಧಿಸಿಂತೆ ಉಂಟಾದ ಮನಸ್ತಾಪದಿಂದಾಗಿ ಇಡೀ ಕುಟುಂಬ ಪ್ರಾಣ ಕಳೆದುಕೊಂಡ ಘಟನೆ ಕೇರಳದಲ್ಲಿ ನಡೆದಿದೆ. ಆಗಸ್ಟ್ 1ರಂದು ಕೇರಳದ ಇಡುಕ್ಕಿಯಲ್ಲಿ ನಾಲ್ವರ ಮೃತದೇಹ ಕಂದಕವೊಂದರಲ್ಲಿ ಪತ್ತೆಯಾಗಿತ್ತು. 52ವರ್ಷದ ಕೃಷ್ಣ, ಕೃಷ್ಣನ ಪತ್ನಿ ಸುಶೀಲ, ಮಕ್ಕಳಾದ ಆಶಾ ಮತ್ತು ಅರ್ಜುನ್ ಅವರ ಮೃತದೇಹಗಳು ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಈ ಕೊಲೆಗಳು ನಡೆದಿವೆ ಅನ್ನೋ ವಿಚಾರ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದಲ್ಲಿ ಅನೀಶ್ ಮತ್ತು ಆತನ ಸ್ನೇಹಿತ ಲಿಬೀಶ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ.

ಬಂಧಿತರ ಪೈಕಿ ಅನೀಶ್, ಮೃತನಾದ ಕೃಷ್ಣ ಎಂಬುವವರ ಬಳಿ ವಾಮಾಚಾರದ ವಿದ್ಯೆ ಕಲಿಯುತ್ತಿದ್ದ. ಆದ್ರೆ ಅನೀಶ್ ವಾಮಾಚಾರದ ವಿದ್ಯೆಯಲ್ಲಿ ಕೃಷ್ಣನಷ್ಟು ಪರಿಣಿತಿ ಸಾಧಿಸಿರಲಿಲ್ಲ. ಅನೀಶ್ ಗೆ ಕೃಷ್ಣ ಕೂಡ ಕೆಲವು ತಂತ್ರಗಳನ್ನ ಹೇಳಿಕೊಟ್ಟಿರಲಿಲ್ಲ . ಕೃಷ್ಣನಿಂದ ಅಲ್ಪ ಪ್ರಮಾಣದಲ್ಲಿ ಕಲಿತ ವಿದ್ಯೆಯನ್ನಿಟ್ಟುಕೊಂಡೇ ಅನೀಶ್ ಪ್ರತ್ಯೇಕವಾಗಿ ವಾಮಾಚಾರವನ್ನು ಅಭ್ಯಸಿಸುತ್ತಿದ್ದ. ಆದ್ರೆ ಇದ್ರಲ್ಲಿ ಅನೀಶ್ ಯಶಸ್ವಿಯಾಗದ ಕಾರಣ ಇದಕ್ಕೆಲ್ಲಾ ಕೃಷ್ಣನೇ ತನಗೆ ವಾಮಾಚಾರದ ವಿದ್ಯೆ ಒಲಿಯದಂತೆ ದಿಗ್ಬಂದನ ಹಾಕಿದ್ದಾನೆ ಅಂತ ಭಾವಿಸಿದ್ದ. ಕೃಷ್ಣನ ಬಳಿ ಇದ್ದಂತಾ ವಾಮಾಚಾರದ ಪುಸ್ತಕ ಕದಿಯೋಕೆ ಸ್ಕೆಚ್ ಹಾಕಿದ್ದ.

ಈ ವಿಚಾರಕ್ಕೆ ಇಬ್ಬರ ಮಧ್ಯೆ ಸಾಕಷ್ಟು ಮನಸ್ತಾಪ ಬೆಳೆದು ಕೊನೆಗೆ ಗುರುವನ್ನೇ ಕೊಲ್ಲೋಕೆ ಅನೀಶ್ ತನ್ನ ಸ್ನೇಹಿತ ಲಿಬೀಶ್ ನ ಸಹಾಯ ಪಡೆದ. ಜುಲೈ 29ರಂದು ರಾತ್ರಿ ವೇಳೆಯಲ್ಲಿ ಕೃಷ್ಣನ ಮನೆಗೆ ತೆರಳಿದ ಅನೀಶ್ ಮತ್ತು ಲಿಬೀಶ್ ಮೊದಲು ಕೃಷ್ಣನ ಮನೆಯಲ್ಲಿದ್ದ ಕುರಿಗಳ ಮೇಲೆ ಹಲ್ಲೆ ನಡೆಸಿ ಕೃಷ್ಣ ಮನೆಯಿಂದ ಹೊರಬರುವಂತೆ ಮಾಡಿದ್ದಾರೆ.

ಕೃಷ್ಣ ಹೊರಗೆ ಬಂದ ನಂತರ ಅವನನ್ನು ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರದಲ್ಲಿ ಇಡೀ ಕುಟುಂಬದ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಮನೆಯಿಂದ 3500 ರೂಪಾಯಿ ದೋಚಿದ್ದು, ಕೃಷ್ಣನ ಬಳಿ ಇದ್ದ ವಾಮಾಚಾರದ ಪುಸ್ತಕ ಪತ್ತೆಹಚ್ಚುವಲ್ಲಿ ಅನೀಶ್ ಸೋತಿದ್ದಾನೆ. ಅನೀಶ್ ಹಲ್ಲೆ ನಡೆಸಿದ ಒಂದು ದಿನದ ನಂತರವೂ ಕೃಷ್ಣ ಮತ್ತು ಆತನ ಮಗ ಬದುಕಿದ್ದರು. ಆನಂತರದಲ್ಲಿ ದೊಡ್ಡದೊಂದು ಗುಂಡಿ ತೆಗೆದು ಎಲ್ಲರನ್ನು ಹೂತು ಹಾಕಿದ್ದಾರೆ. ಘಟನೆ ನಡೆದು ಮೂರು ದಿನಗಳ ಬಳಿಕ ಈ ವಿಚಾರ ಜನರ ಗಮನಕ್ಕೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...