alex Certify
ಕನ್ನಡ ದುನಿಯಾ       Mobile App
       

Kannada Duniya

ಗೋವಾ ಬಿಜೆಪಿ ವೆಬ್ ಸೈಟ್ ನಲ್ಲಿ ಪಾಕ್ ಪರ ಘೋಷಣೆ…!

ಹ್ಯಾಕರ್ ಗಳ ಕೈಚಳಕದಿಂದ ಗೋವಾ ಬಿಜೆಪಿಯ ಅಧಿಕೃತ ವೆಬ್ ಸೈಟ್ ನಲ್ಲಿ ಪಾಕಿಸ್ತಾನ ಪರ ಘೋಷಣೆ ಕಾಣಿಸಿದ್ದು, ಇದೀಗ ಬಿಜೆಪಿ ಕಾರ್ಯಕರ್ತರು ವೆಬ್ ಸೈಟ್ ನ್ನು ರಿಸ್ಟೋರ್ ಮಾಡಿದ್ದಾರೆ.

ಬಿಜೆಪಿ ವೆಬ್ ಸೈಟ್ ನಲ್ಲಿ ಪಾಕಿಸ್ತಾನಿ ಜಿಂದಾಬಾದ್ ಎಂಬ ಘೋಷಣೆಯನ್ನು ಹಾಕಲಾಗಿದೆ. ಆದರೆ ವೆಬ್ ಸೈಟ್ ಹ್ಯಾಕ್ ಮಾಡಿರುವುದು ಪಾಕಿಸ್ತಾನ ಪರ ಸಂಘಟನೆಗಳೋ ಅಥವಾ ಬೇರೆ ಯಾರಾದರು ಈ ಕೆಲಸ ಮಾಡಿದ್ದಾರೋ ಎನ್ನುವ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಆದರೆ ಹ್ಯಾಕರ್ ಗಳು ಮಾತ್ರ, ಮೊಹಮ್ಮದ್ ಬಿಲಾಲ್ ಎಂದು ಹೇಳಿಕೊಂಡಿದ್ದು, ತನ್ನನ್ನು ಗುರುತು ಹಿಡಿಯುವಂತೆ ಸವಾಲು ಹಾಕಿ [email protected] ಇಮೇಲ್ ಐಡಿಯನ್ನು ಹಾಕಿದ್ದಾನೆ.

ಗೋವಾ ಬಿಜೆಪಿ ವಕ್ತಾರರು ಅಥವಾ ಇನ್ಯಾವುದೇ ಕಾರ್ಯಕರ್ತರು ಹ್ಯಾಕ್ ಆಗಿರುವ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಆದರೆ ಹ್ಯಾಕರ್ ಗಳಿಂದ ವೆಬ್ ಸೈಟ್ ವಾಪಾಸು ಪಡೆಯಲು ಪ್ರಯತ್ನ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಮಾದರಿಯಲ್ಲಿ ಕಾಶ್ಮೀರ ಬಿಜೆಪಿಯ ವೆಬ್ ಸೈಟ್ ಕೂಡ ಏಪ್ರಿಲ್ ತಿಂಗಳಲ್ಲಿ ಹ್ಯಾಕ್ ಮಾಡಿ, ಎಂಟು ವರ್ಷದ ಬಾಲಕಿ ಮೇಲಿನ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷಣೆಗಳನ್ನು ಹಾಕಿ, ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...