alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಚುನಾವಣಾ ಆಯೋಗಕ್ಕೂ ಮುನ್ನವೇ ಮತದಾನದ ದಿನಾಂಕ ಪ್ರಕಟಿಸಿದ ಬಿಜೆಪಿ ಮುಖಂಡ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ಪ್ರಕಟಿಸಿದ್ದು, ಬಹು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಮೇ 12 ರಂದು ಒಂದೇ ಹಂತದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 15 ರಂದು ಫಲಿತಾಂಶ ಹೊರ ಬೀಳಲಿದೆ.

ಆದರೆ ಇಂದು ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಿಸುವ ಮುನ್ನವೇ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ತಮ್ಮ ಸಾಮಾಜಿಕ ಜಾಲತಾಣ ಖಾತೆ ಟ್ವಿಟ್ಟರ್ ನಲ್ಲಿ ಮತದಾನದ ದಿನಾಂಕ ಹಾಗೂ ಫಲಿತಾಂಶದ ದಿನಾಂಕ ಪ್ರಕಟಿಸಿರುವುದು ಕುತೂಹಲ ಮೂಡಿಸಿದೆ.

ತಮ್ಮ ಟ್ವೀಟ್ ನಲ್ಲಿ ಅಮಿತ್ ಮಾಳವೀಯ ಮತದಾನದ ದಿನ ಮೇ 12 ಎಂದು ಹೇಳಿದ್ದು, ಫಲಿತಾಂಶ ಮೇ 18 ರಂದು ಪ್ರಕಟವಾಗಲಿದೆ ಎಂದು ಹೇಳಿದ್ದಾರೆ. ಮತದಾನದ ದಿನಾಂಕ ನಿಖರವಾಗಿ ಮಾಳವೀಯ ಹೇಳಿದ್ದು, ಫಲಿತಾಂಶದ ಕುರಿತು ಅವರ ಟ್ವೀಟ್ ತಪ್ಪಾಗಿದೆ. ಚುನಾವಣಾ ದಿನಾಂಕವನ್ನು ಗೌಪ್ಯವಾಗಿಟ್ಟಿದ್ದರೂ ಆಯೋಗ ಘೋಷಣೆ ಮಾಡುವುದಕ್ಕಿಂತ ಮೊದಲೇ ಅಮಿತ್ ಮಾಳವೀಯಾಗೆ ಲಭ್ಯವಾಗಿದ್ದು ಹೇಗೆ ಎಂಬ ಪ್ರಶ್ನೆ ಈಗ ಮೂಡಿದೆ. ತಮ್ಮ ಟ್ವೀಟ್ ಕುರಿತು ಸ್ಪಷ್ಟನೆ ನೀಡಿರುವ ಅಮಿತ್ ಮಾಳವೀಯ, ಸುದ್ದಿ ವಾಹಿನಿಗಳ ಮಾಹಿತಿ ಆಧರಿಸಿ ಈ ಟ್ವೀಟ್ ಮಾಡಿದ್ದಾಗಿ ತಿಳಿಸಿದ್ದಾರೆ. ತಮ್ಮ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಅಮಿತ್ ಮಾಳವೀಯ ಅದನ್ನು ಡಿಲಿಟ್ ಮಾಡಿದ್ದಾರೆ.

ಕೇಂದ್ರ ಚುನಾವಣಾ ಆಯುಕ್ತ ಒ.ಪಿ. ರಾವತ್ ರ ಇಂದಿನ ಪತ್ರಿಕಾಗೋಷ್ಟಿಯಲ್ಲಿ ಕೆಲ ಪತ್ರಕರ್ತರು, ಮೊದಲೇ ಚುನಾವಣಾ ದಿನಾಂಕ ಬಹಿರಂಗವಾಗಿರುವುದರ ಕುರಿತು ಅವರ ಗಮನ ಸೆಳೆದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ರಾವತ್ ಹೇಳಿದ್ದಾರೆ. ತನಿಖೆ ನಡೆಸಿ ಚುನಾವಣಾ ದಿನಾಂಕ ಬಹಿರಂಗಪಡಿಸಿರುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...