alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬ ಆಚರಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ ಬಿಜೆಪಿ ನಾಯಕ

ಭೋಪಾಲ್‌: ಕೇಕ್‌ ಕಟ್‌ ಮಾಡಿ ಹುಟ್ಟು ಹಬ್ಬ ಆಚರಿಸುವುದು ವಾಡಿಕೆ. ಅಷ್ಟೇ ಏಕೆ, ಅನ್ನದಾನ, ರಕ್ತದಾನ ಇನ್ನಿತರ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಹುಟ್ಟು ಹಬ್ಬ ಆಚರಿಸುವುದೂ ಹೊಸತೇನಲ್ಲ. ಆದರೆ ಭೋಪಾಲ್‌ನ ಬಿಜೆಪಿ ಯುವ ಮೋರ್ಚಾದ ರಾಹುಲ್‌ ರಾಜ್‌ಪೂತ್‌ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ತನ್ನ ಹುಟ್ಟುಹಬ್ಬ ಆಚರಿಸಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ರಾಹುಲ್‌, ಗಾಳಿಯಲ್ಲಿ ಗುಂಡು ಹಾರಿಸುವ ವಿಡಿಯೋ ವೈರಲ್‌ ಆಗಿದ್ದು, ಭೈರಗಡ ಪೊಲೀಸ್‌ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

ಈ ಸಂಬಂಧ ಸ್ಪಷ್ಟೀಕರಣ ನೀಡಿರುವ ರಾಹುಲ್‌, ಅದು ಏರ್‌ಗನ್‌ ಆಗಿದ್ದು, ಚೀನಾದ ಉತ್ಪನ್ನ. ಇದು ನನ್ನ ಪರವಾನಗಿ ಇರುವ ರಿವಾಲ್ವರ್‌ ಅಲ್ಲ. ಕಾರ್ಯಕರ್ತರು ನನ್ನ ಹುಟ್ಟು ಹಬ್ಬ ಆಚರಣೆ ವೇಳೆ ಏರ್‌ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಲು ಮನವಿ ಮಾಡಿದ್ದರು ಎಂದು ತಿಳಿಸಿದ್ದಾರೆ.

ಭೈರಾಗಡ ಪೊಲೀಸ್‌ ಠಾಣೆಯ ಮಹೇಂದ್ರ ಸಿಂಗ್‌ ಚೌಹಾಣ್‌, ದೂರು ದಾಖಲಾಗಿರುವುದನ್ನು ಖಚಿತಪಡಿಸಿದ್ದು, ಈ ಸಂಬಂಧ ಪರಿಶೀಲನೆ ನಡೆಸಲಾಗುವುದು. ಪರವಾನಗಿ ಪಡೆದ ರಿವಾಲ್ವರ್‌ನಿಂದ ಸುಖಾ ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದೂ ಅಪರಾಧವೇ ಆಗಿದೆ. ದೂರು ನೀಡಿದವರು ವಿಡಿಯೋ ಹಾಗೂ ಇನ್ನಿತರ ದಾಖಲೆ ನೀಡಿದ್ದಾರೆ. ರಾಹುಲ್‌ ಜತೆಗೆ ಬಿಜೆಪಿ ಅಧ್ಯಕ್ಷ ನಿತಿನ್‌ ದುಬೆಯೂ ಗುಂಡು ಹಾರಿಸಿದ್ದಾಗಿ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...