alex Certify
ಕನ್ನಡ ದುನಿಯಾ       Mobile App
       

Kannada Duniya

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಬಹುದಾದ ಸ್ಥಾನವೆಷ್ಟು…?

ಮುಂಬರುವ 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 297 ರಿಂದ 303 ಸ್ಥಾನ ಗಳಿಸುವುದು ಖಚಿತ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೊಂಡಿದ್ದಾರೆ.

ಮುಂಬೈನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತಾವು ಮಾಡಿಸಿದ ಸರ್ವೆಯಲ್ಲಿ ಈ ಅಂಗತಿ ಸ್ಪಷ್ಟವಾಗಿದೆ. ದೇಶಾದ್ಯಂತ 5.4 ಲಕ್ಷ ಜನರ ಅಭಿಪ್ರಾಯ ಆಧರಿಸಿ ಸರ್ವೆ ನಡೆದಿದೆ ಎಂದವರು ಹೇಳಿದ್ದಾರೆ.

2013 ರಲ್ಲೂ ಇದೇ ರೀತಿ ಸರ್ವೆ ಮಾಡಿಸಿದ್ದು, ಆಗಲೂ ಸಹ ನಿಖರತೆ ಇತ್ತು. ಮುಂದಿನ ಚುನಾವಣೆಯಲ್ಲೂ ಪುನಃ ಜನ ನಮಗೆ ಅವಕಾಶ ಕೊಡುವವರಿದ್ದಾರೆ ಎಂದು ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಈ ಸರ್ವೆ ಮಾಡಿದ್ದು ಬಿಜೆಪಿಯಲ್ಲ. ಖಾಸಗಿ ಸಂಸ್ಥೆ, ಮೀಡಿಯಾ ಹೌಸ್ ಒಂದು ಈ ಕಾರ್ಯ ಮಾಡಿದೆ ಎಂದು ಹೇಳಿದರಲ್ಲದೇ 5.4 ಲಕ್ಷ ಜನರ ಅಭಿಪ್ರಾಯ ಸಂಗ್ರಹಿಸಿದ ಅತಿ ದೊಡ್ಡ ಸರ್ವೆ ಅದಾಗಿತ್ತು ಎಂದಿದ್ದಾರೆ.

ಇತ್ತೀಚೆಗೆ ಟೈಮ್ಸ್ ನೌ-ಸಿ ಎನ್ ಎಕ್ಸ್ ನಡೆಸಿದ ಸರ್ವೆಯಲ್ಲಿ ಕೂಡ ಪ್ರಭಾವಿ ಪ್ರಧಾನಿ ಮುಖವಾಗಿ ಮೋದಿ ಮತ್ತೆ ಕಾಣಿಸಿಕೊಂಡಿದ್ದಾರೆ. ಶೇ.69 ಮಂದಿ 2019 ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಶೇ.23 ಮಂದಿ ಮಾತ್ರ ರಾಹುಲ್ ಗಾಂಧಿ ಬಗ್ಗೆ ಒಲವು ತೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...