alex Certify
ಕನ್ನಡ ದುನಿಯಾ       Mobile App
       

Kannada Duniya

2 ಸೀಟು ಗೆದ್ದ ಬಿ.ಜೆ.ಪಿ.ಯಿಂದ ಮೇಘಾಲಯದಲ್ಲೂ ಸರ್ಕಾರ ರಚನೆಗೆ ಪ್ಲಾನ್

ನವದೆಹಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ನಾಗಾಲ್ಯಾಂಡ್ ನಲ್ಲಿ ಭರ್ಜರಿ ಜಯಗಳಿಸಿರುವ ಬಿ.ಜೆ.ಪಿ. ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಇದೇ ವೇಳೆ 2 ಸ್ಥಾನಗಳನ್ನಷ್ಟೇ ಜಯಗಳಿಸಿರುವ ಮೇಘಾಲಯದಲ್ಲಿಯೂ ಬಿ.ಜೆ.ಪಿ. ಸರ್ಕಾರ ರಚನೆಗೆ ಮುಂದಾಗಿದೆ.

ಒಟ್ಟು 60 ಕ್ಷೇತ್ರಗಳ ಮೇಘಾಲಯದಲ್ಲಿ ಕಾಂಗ್ರೆಸ್ 21 ಸ್ಥಾನ ಗಳಿಸಿದ ದೊಡ್ಡ ಪಕ್ಷವಾಗಿದೆ. ಎನ್.ಪಿ.ಪಿ. 19, ಇತರರು 17 ಹಾಗೂ ಬಿ.ಜೆ.ಪಿ. 2 ಸ್ಥಾನಗಳಲ್ಲಿ ಜಯಗಳಿಸಿದೆ. ಸರ್ಕಾರ ರಚನೆಗೆ 31 ಸದಸ್ಯರ ಬೆಂಬಲ ಬೇಕಿದ್ದು, ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿರುವ ಕಾಂಗ್ರೆಸ್ ಅಧಿಕಾರ ರಚಿಸುವ ಪ್ರಯತ್ನ ನಡೆಸಿದೆ.

ಇದೇ ವೇಳೆ 34 ಸದಸ್ಯರನ್ನು ಒಗ್ಗೂಡಿಸಿಕೊಂಡ ಬಿ.ಜೆ.ಪಿ., ತನ್ನ ಮಿತ್ರ ಪಕ್ಷ ಎನ್.ಪಿ.ಪಿ. ಬೆಂಬಲದೊಂದಿಗೆ ಕಾಂಗ್ರೇಸೇತರ ಸರ್ಕಾರ ರಚಿಸಲು ಕಾರ್ಯತಂತ್ರ ರೂಪಿಸಿದೆ. ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...