alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿ ಹೆಚ್ಚು ಅಪಹರಣ ಪ್ರಕರಣಗಳು ದಾಖಲಾಗಿರುವುದು ಯಾವ ಪಕ್ಷದ ಜನ ಪ್ರತಿನಿಧಿಗಳ ಮೇಲೆ ಗೊತ್ತಾ?

ನವದೆಹಲಿ: ರಾಷ್ಟ್ರದಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣ ದಾಖಲಾಗಿರುವ ರಾಜಕೀಯ ಮುಖಂಡರ ಪೈಕಿ ಬಿಜೆಪಿಗೆ ಮೊದಲ ಸ್ಥಾನ ಸಿಕ್ಕಿದೆ. ಅದರಲ್ಲೂ ಅಪಹರಣದಂತಹ ಪ್ರಕರಣಗಳಲ್ಲಿ ಬಿಜೆಪಿ ಸಂಸದರು ಹಾಗೂ ಶಾಸಕರ ಹೆಸರು ಹೆಚ್ಚಾಗಿದೆ ಎಂದು ಖಾಸಗಿ ಎನ್‌ಜಿಒ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಒಟ್ಟಾರೆ ಬಿಜೆಪಿಯ 16 ಮಂದಿಯ ಮೇಲೆ ಕಿಡ್ನಾಪ್‌ ಪ್ರಕರಣಗಳಿದ್ದು, ಕಾಂಗ್ರೆಸ್‌ ಹಾಗೂ ಆರ್‌ಜೆಡಿಯ ತಲಾ 6 ನಾಯಕರ ಮೇಲೂ ಇಂತಹ ಪ್ರಕರಣಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ರಾಷ್ಟ್ರದ ಶೇ.21 ರಷ್ಟು ಶಾಸಕರು ಹಾಗೂ ಸಂಸದರು ಪ್ರಮುಖ ಕ್ರಿಮಿನಲ್‌ ಕೇಸುಗಳನ್ನು ಎದುರಿಸುತ್ತಿದ್ದಾರೆ. ಅಂದರೆ ಸುಮಾರು 1024 ರಾಜಕೀಯ ನಾಯಕರು ಇಂತಹ ಪ್ರಕರಣಗಳ ಮೊಕದ್ದಮೆ ಎದುರಿಸುತ್ತಿದ್ದಾರೆ.

ಸುಮಾರು 64 ಅಪರಾಧಗಳು ಅಪಹರಣ ಪ್ರಕರಣಗಳಾದರೆ, 17 ರಾಜಕೀಯ ವಿಚಾರಗಳಲ್ಲಿ ಪ್ರಕರಣ ದಾಖಲಾಗಿದೆ. ಇದಲ್ಲದೆ ಎನ್‌ಸಿಪಿ- 5, ಬಿಜೆಡಿ ಹಾಗೂ ಡಿಎಂಕೆ ತಲಾ 4, ಎಸ್‌ಪಿ, ಟಿಡಿಪಿ ತಲಾ 3 ಹಾಗೂ ತೃಣಮೂಲ ಕಾಂಗ್ರೆಸ್‌, ಸಿಪಿಎಐ-ಎಂ, ಸಿಪಿಐ-ಎಂಎಲ್‌ ಹಾಗೂ ಶಿವಸೇನಾ ವಿರುದ್ಧ ತಲಾ 2, ಲೋಕ್‌ ಜನಶಕ್ತಿ, ಜೆಡಿಯು, ಟಿಆರ್‌ಎಸ್‌, ಉತ್ತರ ಪ್ರದೇಶದ ನಿಶದ್‌ ಪಾರ್ಟಿಯ ಶಾಸಕರ ಮೇಲೆ ತಲಾ 1 ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.

ಬಿಹಾರ ಹಾಗೂ ಉತ್ತರ ಪ್ರದೇಶ ಭಾಗದ ಶಾಸಕರ ಮೇಲೆ 9 ಅಪಹರಣದ ಕೇಸುಗಳಿದ್ದರೆ, ಮಹಾರಾಷ್ಟ್ರ- 8, ಪಶ್ಚಿಮ ಬಂಗಾಳದಲ್ಲಿ 6, ಒರಿಸ್ಸಾ ಹಾಗೂ ತಮಿಳುನಾಡಿನಲ್ಲಿ ತಲಾ 4, ಆಂಧ್ರಪ್ರದೇಶ, ಗುಜರಾತ್‌ ಹಾಗೂ ರಾಜಸ್ಥಾನದಲ್ಲಿ ತಲಾ 3, ಛತ್ತೀಸ್‌ಗಡ, ಹಿಮಾಚಲ ಪ್ರದೇಶ್‌, ಜಾರ್ಖಂಡ್‌, ಕರ್ನಾಟಕ, ಕೇರಳ, ಪಂಜಾಬ್‌ ಮತ್ತು ತೆಲಂಗಾಣದಲ್ಲಿ ತಲಾ ಓರ್ವ ಶಾಸಕರ ಮೇಲೆ ಅಪಹರಣದ ಪ್ರಕರಣಗಳು ದಾಖಲಾಗಿವೆ ಎಂದು ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...