alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ಗೆಲ್ಲಲೂ ಚಹಾದ್ದೇ ರಣತಂತ್ರ; ಆದ್ರೆ ಡಿಫರೆಂಟ್

2013 ರಲ್ಲಿ ನಡೆದ ಮಹಾ ಚುನಾವಣೆಯನ್ನು ‘ಚಾಯ್ ಪೇ ಚರ್ಚಾ’ ಕಾನ್ಸೆಪ್ಟ್ ಮೂಲಕ ಜಯಭೇರಿ ಬಾರಿಸಿದ್ದ ಭಾರತೀಯ ಜನತಾ ಪಾರ್ಟಿ ಮುಂಬರುವ 2019 ರ ಮಹಾ ಚುನಾವಣೆಯನ್ನು ಟಿ20 ಕಾನ್ಸೆಪ್ಟ್ ಮೂಲಕ ಮತ್ತೆ ಗೆಲ್ಲಲು ಪ್ಲಾನ್ ರೆಡಿ ಮಾಡಿಕೊಂಡಿದೆ.

ಅರೇ ರಾಜಕೀಯದಲ್ಲೇಕೆ ಟಿ20 ಬಂತು ಅಂತ ಯೋಚಿಸದಿರಿ. ಈ ಟಿ20 ಗೂ ಕ್ರಿಕೆಟ್ ಗೂ ಯಾವುದೇ ರೀತಿಯ ಸಂಬಂಧವಿಲ್ಲ.

ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಇಂದಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಚಾಯ್ ವಾಲಾ ಎಂದು ಛೇಡಿಸಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದ ಬಿಜೆಪಿ, ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಚಿಂದಿ ಉಡಾಯಿಸಿತ್ತು. ಇದೀಗ ಬಿಜೆಪಿ ಮತ್ತೆ ಚಾಯ್ ಮೊರೆ ಹೋಗಿದೆ.

ಕಳೆದ ಬಾರಿ ಬೂತ್ ಮಟ್ಟ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿತ್ತು ಈ ಬಾರಿ ಮನೆಯಿಂದಲೇ ಮನವರಿಕೆ ಮಾಡುವ ಕಾರ್ಯಕ್ಕೆ ಕೈಹಾಕಿದೆ. ಟಿ20 ಯಲ್ಲಿ ಟಿ ಅಂದರೆ ಚಾಯ್ ಅರ್ಥಾತ್ ಟೀ. 20 ಅಂದರೆ ಇಪ್ಪತ್ತು ಮನೆಗಳು ಅಂತರ್ಥ. ಅಂದರೆ ಪ್ರತಿ ಕಾರ್ಯಕರ್ತನಿಗೂ 20 ಮನೆಗಳ ಜವಾಬ್ದಾರಿ ನೀಡಲಾಗುತ್ತಿದೆ.

ಆತ ತನಗೆ ಜವಾಬ್ದಾರಿ ನೀಡಿದ ಮನೆಗಳಿಗೆ ತೆರಳಿ ಎನ್ಡಿಎ ಸರ್ಕಾರದ ಕಾರ್ಯ ನಿರ್ವಹಣೆ, ಸಾಧನೆಗಳ ಬಗ್ಗೆ ಮನವರಿಕೆ ಮಾಡುತ್ತಾನೆ. ಮನೆಯವರಲ್ಲಿ ಅನುಮಾನಗಳು ಉಳಿದುಕೊಂಡಿದ್ದರೆ ಪರಿಹರಿಸುತ್ತಾನೆ. ಇದಕ್ಕಾಗಿ ಹರ್ ಬೂತ್ ದಸ್ ಯೂತ್(ಪ್ರತಿ ಬೂತಿಗೆ ಹತ್ತು ಯುವಕರು) ಎಂದು ಬಿಜೆಪಿ ನಿರ್ಧರಿಸಿದೆ. ಜೊತೆಗೆ ಸರ್ಕಾರದ ಸಾಧನೆಗಳನ್ನು ತಿಳಿಸುವ ಸಲುವಾಗಿ ನಮೋ ಆ್ಯಪ್ ರೆಡಿ ಮಾಡಲಾಗಿದೆ. ಈ ಆ್ಯಪ್ ನಲ್ಲಿ ಪ್ರತಿ ಬೂತ್ ನಿಂದ ಕನಿಷ್ಠ ನೂರು ಮಂದಿಯನ್ನು ಸೇರಿಸುವ ಗುರಿ ಹೊಂದಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...