alex Certify
ಕನ್ನಡ ದುನಿಯಾ       Mobile App
       

Kannada Duniya

2019 ರ ಲೋಕಸಭಾ ಚುನಾವಣೆ ಕುರಿತ ಸಮೀಕ್ಷೆ ಹೇಳಿದ್ದೇನು?

ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ಅತಂತ್ರ ಸನ್ನಿವೇಶ ನಿರ್ಮಾಣವಾಗುವ ಫಲಿತಾಂಶ ಬರುವ ಸಾಧ್ಯತೆ ಹೆಚ್ಚಿದೆ ಎಂದು ಟೈಮ್ಸ್ ನೌ ಸರ್ವೆ ಬಿಂಬಿಸಿದೆ.

ಈಗಲೇ ಚುನಾವಣೆ ನಡೆದರೆ ಬಿಜೆಪಿ ಕಳೆದ ಬಾರಿಗಿಂತ 50 ಕ್ಕಿಂತ ಹೆಚ್ಚು ಸ್ಥಾನ ಕಳೆದುಕೊಳ್ಳಲಿದೆ. ಕಾಂಗ್ರೆಸ್ 30 ಹೆಚ್ಚು ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಇತರೆ ಪಕ್ಷಗಳ ಬೆಂಬಲ ಅನಿವಾರ್ಯ ಎಂಬುದು ಸರ್ವೆಯಲ್ಲಿ ಕಂಡು ಬರುತ್ತಿದೆ. ಆದರೆ ಕಾಂಗ್ರೆಸ್ ಪರಿಸ್ಥಿತಿಗೆ ಹೋಲಿಸಿದರೆ ಬಿಜೆಪಿ ಅಧಿಕಾರ ಹಿಡಿಯುವುದು ಕಷ್ಟವಾಗಲಿಕ್ಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇರುವಾಗ ಕೇಂದ್ರಕ್ಕೆ ಈ ಸರ್ವೆ ಎಚ್ಚರಿಕೆ ಗಂಟೆಯಾಗಿದ್ದು, ಸರ್ಕಾರದ ಬಗ್ಗೆ ಜನರ ಭಾವನೆಗಳನ್ನು ಈ ಸರ್ವೆಯಲ್ಲಿ ಕಟ್ಟಿಕೊಡಲಾಗಿದೆ.

ವಿದೇಶಾಂಗ ನೀತಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಜನ ಮೆಚ್ಚಿಕೊಂಡಿದ್ದಾರೆ. ಆದರೆ, ಮಧ್ಯಮ ವರ್ಗದ ಜನ ಕೇಂದ್ರದ ತೀರ್ಮಾನಗಳ ಬಗ್ಗೆ ಪೂರ್ಣ ತೃಪ್ತಿ ವ್ಯಕ್ತಪಡಿಸಿಲ್ಲ. ಜತೆಗೆ ಪರ್ಯಾಯ ಆಯ್ಕೆ ಇಲ್ಲದೇ ಇರುವುದನ್ನೂ ಸೂಕ್ಷ್ಮವಾಗಿ ಹೊರಹಾಕಿದ್ದಾರೆ. ಈಗಿನ ಅಂದಾಜಿನ ಪ್ರಕಾರ ಹಿಂದಿ ಭಾಷಾ ರಾಜ್ಯಗಳಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳುವ ಬಗ್ಗೆ ಎಚ್ಚರಿಕೆ ಸಂದೇಶ ಬಿಜೆಪಿಗೆ ಸಿಕ್ಕಿದೆ.

ಸರ್ವೆ ನಡೆದಿದ್ದು ಹೇಗೆ?
25 ರಾಜ್ಯಗಳ 156 ಲೋಕಸಭೆ ಕ್ಷೇತ್ರದ 12879 ಮತದಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ವಾರ್ ರೂಂ ರಾಜಕೀಯ ಅಧ್ಯಯನ ಮತ್ತು ಸಂವಹನ ಏಜೆನ್ಸಿ ಹಾಗೂ ಯುಟೋಪಿಯ ಕನ್ಸೆಲ್ಟಿಂಗ್ ಸಹಯೋಗ ಪಡೆದು ವಿಶ್ಲೇಷಿಸಲಾಗಿದೆ. ಜತೆಗೆ ಸರ್ವೆ ತಪ್ಪು ಸರಿ ವ್ಯತ್ಯಾಸ ಶೇ.0.25 ರಷ್ಟು ಹೆಚ್ಚು ಕಡಿಮೆಯಾಗಬಹುದು ಎಂದು ಸಂಸ್ಥೆ ತನ್ನ ಸರ್ವೆಯಲ್ಲಿ ನಿಖರತೆಯನ್ನು ಸಮರ್ಥಿಸಿಕೊಂಡಿದೆ.

ಮುಖ್ಯಾಂಶಗಳೇನೇನಿದೆ?
ಆಂಧ್ರ, ತಮಿಳುನಾಡು, ಒಡಿಶಾ, ಪಶ್ಚಿಮಬಂಗಾಳದಲ್ಲಿ ಬಿಜೆಪಿಗೆ ಕೊಂಚ ಲಾಭವಾದರೆ, ರಾಜಸ್ಥಾನ, ಗುಜರಾತ್, ಛತ್ತೀಸ್ಗಡ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶದಲ್ಲಿ ದೊಡ್ಡ ನಷ್ಟವಾಗಲಿದೆ. ಇದೇ ವೇಳೆ ಕಾಂಗ್ರೆಸ್ ರಾಜಸ್ಥಾನ ಮತ್ತಿತರ ಕಡೆ ಉತ್ತಮ ಸಾಧನೆ ಮಾಡುವ ಸಾಧ್ಯತೆ ಇದೆ.

ಒಟ್ಟು ಲೆಕ್ಕಾಚಾರವೆಷ್ಟು?
– 2014ರಲ್ಲಿ 282 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 227ಕ್ಕೆ ಕುಸಿಯಲಿದೆ.
– 2014ರಲ್ಲಿ 44 ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್ 77 ಸ್ಥಾನಕ್ಕೇರಲಿದೆ.
– 2014ರಲ್ಲಿ 217 ಸ್ಥಾನ ಪಡೆದಿದ್ದ ಇತರೆ ಪಕ್ಷಗಳು 238 ಸ್ಥಾನ ಪಡೆಯಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...