alex Certify
ಕನ್ನಡ ದುನಿಯಾ       Mobile App
       

Kannada Duniya

ಸೇಡು ತೀರಿಸಿಕೊಂಡ ಬಿ.ಜೆ.ಪಿ.ಗೆ ಭರ್ಜರಿ ಜಯ

ನವದೆಹಲಿ: ಎಸ್.ಪಿ. –ಬಿ.ಎಸ್.ಪಿ. ಮೈತ್ರಿಯಿಂದ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಲೋಕಸಭೆ ಉಪ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಬಿ.ಜೆ.ಪಿ. ಇದರ ಬೆನ್ನಲ್ಲೇ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಸೇಡು ತೀರಿಸಿಕೊಂಡಿದೆ.

ಎಸ್.ಪಿ. ಮತ್ತು ಬಿ.ಎಸ್.ಪಿ. ಶಾಸಕರೇ ಬಿ.ಜೆ.ಪಿ. ಅಭ್ಯರ್ಥಿಯನ್ನು ಬೆಂಬಲಿಸಿ ಅಡ್ಡ ಮತದಾನ ಮಾಡಿದ್ದಾರೆ. ಈ ಮೂಲಕ ಬಿ.ಜೆ.ಪಿ.ಯ 9 ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿ.ಜೆ.ಪಿ. ಮೈತ್ರಿ ಪಕ್ಷಗಳು 324 ಸ್ಥಾನ ಹೊಂದಿದ್ದು, ಬಿ.ಜೆ.ಪಿ. ಸುಲಭವಾಗಿ 8 ಸ್ಥಾನ ಗೆಲ್ಲಬಹುದಾಗಿತ್ತು. ಆದರೆ, ಚಾಣಾಕ್ಷ ನಡೆಯಿಂದ 9 ನೇ ಸ್ಥಾನವನ್ನು ಕೂಡ ಜಯಿಸಿದೆ.

ಉತ್ತರಪ್ರದೇಶದಿಂದ ರಾಜ್ಯಸಭೆಗೆ ಬಿ.ಜೆ.ಪಿ.ಯ ಅರುಣ್ ಜೇಟ್ಲಿ, ಅಶೋಕ್ ಭಾಜಪೇಯಿ, ಜೆ.ವಿ.ಎಲ್. ನರಸಿಂಹ ರಾವ್, ವಿಜಯ್ ಪಾಲ್ ಸಿಂಗ್ ತೋಮರ್, ಸಕಲ್ ದೀಪ್ ರಾಜ್ ಭರ್, ಕಾಂತಾ ಕರ್ದಮ್, ಅನಿಲ್ ಜೈನ್, ಹರಿನಾಥ್ ಸಿಂಗ್ ಯಾದವ್, ಅನಿಲ್ ಕುಮಾರ್ ಅಗರ್ವಾಲ್ ಹಾಗೂ ಸಮಾಜವಾದಿ ಪಕ್ಷದಿಂದ ಜಯಪ್ರದಾ ಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 6 ಸ್ಥಾನಗಳಲ್ಲಿ ಬಿ.ಜೆ.ಪಿ.ಯ ಪ್ರಕಾಶ್ ಜಾವಡೇಕರ್, ನಾರಾಯಣ ರಾಣೆ, ವಿ.ಮುರಳೀಧರನ್ ಜಯಗಳಿಸಿದ್ದು, ಶಿವಸೇನೆ, ಕಾಂಗ್ರೆಸ್, ಎನ್.ಸಿ.ಪಿ.ಯ ತಲಾ ಒಬ್ಬರು ಜಯಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...