alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ಸಂಸದನಿಗೆ 1 ತಿಂಗಳು ಜೈಲು ಶಿಕ್ಷೆ

ಉತ್ತರ ಪ್ರದೇಶದ ಡುಮಾರಿಯಾಗಂಜ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಜಗದಂಬಿಕಾ ಪಾಲ್ ಗೆ ಸ್ಥಳೀಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. 2014ರ ಲೋಕಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಸಂಸದರು ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದೆ.

ಒಂದು ತಿಂಗಳ ಜೈಲು ಶಿಕ್ಷೆಯನ್ನು ಕೂಡ ವಿಧಿಸಿದೆ. ಆದ್ರೆ ಮರುಕ್ಷಣವೇ ಸಂಸದರಿಗೆ ಜಾಮೀನು ಕೂಡ ದೊರೆತಿದೆ. ಮುಖ್ಯ ನ್ಯಾಯಾಧೀಶರಾದ ಸಂಜಯ್ ಚೌಧರಿ ನಿನ್ನೆ ತೀರ್ಪು ನೀಡಿದ್ದರು. ಒಂದು ತಿಂಗಳ ಜೈಲು ಶಿಕ್ಷೆ ಹಾಗೂ 100 ರೂಪಾಯಿ ದಂಡ ಕೂಡ ವಿಧಿಸಲಾಗಿತ್ತು.

ಆದ್ರೆ ತಕ್ಷಣವೇ ಜಾಮೀನು ದೊರೆತಿರುವುದರಿಂದ ಸಂಸದರು ಜೈಲು ಸೇರುವ ಪ್ರಮೇಯವಿಲ್ಲ. 2014ರ ಲೋಕಸಭಾ ಚುನಾವಣೆಗೂ  ಮುನ್ನ ಕಾಂಗ್ರೆಸ್ ತೊರೆದು ಜಗದಂಬಿಕಾ ಪಾಲ್ ಬಿಜೆಪಿ ಸೇರಿದ್ದರು. ಚುನಾವಣಾ ರ್ಯಾಲಿಯಲ್ಲಿ ನಿಯಮ ಉಲ್ಲಂಘಿಸಿ ಅಧಿಕ ವಾಹನ ಬಳಸಿದ ಆರೋಪ ಅವರ ಮೇಲಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...