alex Certify
ಕನ್ನಡ ದುನಿಯಾ       Mobile App
       

Kannada Duniya

ಸಪ್ನಾ ಚೌಧರಿ ಬಗ್ಗೆ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆ

ಹರ್ಯಾಣದ ಪ್ರಸಿದ್ಧ ಜಾನಪದ ಕಲಾವಿದೆ ಸಪ್ನಾ ಚೌಧರಿ ಕಾಂಗ್ರೆಸ್ ಗೆ ಹತ್ತಿರವಾಗ್ತಿದ್ದಾರೆ. ಸಪ್ನಾ ಚೌಧರಿ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಸಪ್ನಾ ಕಾಂಗ್ರೆಸ್ ಬೆಂಬಲ ಬಿಜೆಪಿ ವಿವಾದಾತ್ಮಕ ಹೇಳಿಕೆಗೆ ಕಾರಣವಾಗಿದೆ. ಹರ್ಯಾಣದ ಕರ್ನಲ್ ಸಂಸದ ಅಶ್ವಿನಿ ಕುಮಾರ್ ಚೋಪ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನಲ್ಲಿ ಸೊಂಟ ಕುಣಿಸುವವರು ಯಾರಿದ್ದಾರೋ ಅವರೇ ಸೊಂಟ ಕುಣಿಸಲಿದ್ದಾರೆ. ಚುನಾವಣೆ ಗೆಲ್ಲಬೇಕೋ ಅಥವಾ ಸೊಂಟ ಕುಣಿಸಬೇಕೋ ಎನ್ನುವುದನ್ನು ಮುಂದೆ ನೋಡಬೇಕಿದೆ ಎಂದು ಅಶ್ವಿನ್ ಕಮೆಂಟ್ ಮಾಡಿದ್ದಾರೆ.

ಜೂನ್ 22ರಂದು ಸಪ್ನಾ ಸೌಧರಿ ಕಾಂಗ್ರೆಸ್ ಮುಖ್ಯ ಕಚೇರಿಗೆ ಹೋಗಿದ್ದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರಿಂದ ಪ್ರಭಾವಿತನಾಗಿದ್ದೇನೆ. ಹಾಗಾಗಿ ಅವರ ಭೇಟಿಗೆ ಬಂದಿದ್ದೆ. ಭೇಟಿ ಸಾಧ್ಯವಾಗಲಿಲ್ಲವೆಂದು ಸಪ್ನಾ ಹೇಳಿದ್ದರು.

ನಾನು ರಾಜಕೀಯಕ್ಕೆ ಬರುವುದಿಲ್ಲ. ಆದ್ರೆ ಪಕ್ಷದ ಪರ ಪ್ರಚಾರ ಮಾಡಬಲ್ಲೆ ಎಂದು ಸಪ್ನಾ ಹೇಳಿದ್ದರು. ಸಪ್ನಾ ಹರ್ಯಾಣದಲ್ಲೊಂದೇ ಅಲ್ಲ ಉತ್ತರ ಭಾರತದಲ್ಲಿಯೇ ಸಾಕಷ್ಟು ಹೆಸರು ಮಾಡಿದ್ದಾರೆ. ಅವ್ರ ಪ್ರಚಾರ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...