alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕಾರಿಯೊಂದಿಗೆ ಬಿಜೆಪಿ ಶಾಸಕನ ಅನುಚಿತ ವರ್ತನೆ

ಲಕ್ನೋ: ದೇಶ ಬಲಿಷ್ಠವಾಗಬೇಕಾದರೆ ಹಿಂದುಗಳೂ ಕನಿಷ್ಠ ಐದು ಮಕ್ಕಳನ್ನು ಹೊಂದಬೇಕು ಎಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮತ್ತೊಮ್ಮೆ ಲೈಮ್ ಲೈಟ್ ಗೆ ಬಂದಿದ್ದಾರೆ.

ಶನಿವಾರ ಅವರು ಮತ್ತು ಅವರ ಬೆಂಬಲಿಗರು ಜಿಲ್ಲಾ ಶಾಲಾ ತಪಾಸಣಾಧಿಕಾರಿ (ಡಿಐಒಎಸ್) ಜೊತೆ ಅನುಚಿತವಾಗಿ ವರ್ತಿಸಿ ತಳ್ಳಾಡಿದ್ದಾರೆ. ಈ ಸಂದರ್ಭದಲ್ಲಿ ಮಾಡಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದೆ.

ಬಲಿಯಾದಲ್ಲಿ ನಡೆದ ಅಧಿಕೃತ ಸರ್ಕಾರಿ ಸಭೆಯಲ್ಲೇ ಈ ಘಟನೆ ನಡೆದಿದ್ದು, ಜಿಲ್ಲಾ ನ್ಯಾಯಾಧೀಶರೂ ಸಹ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದರೆಂದು ತಿಳಿದುಬಂದಿದೆ.

ವಿಡಿಯೋದಲ್ಲಿ ಕಾಣಿಸುವಂತೆ, ಆ ಶಾಸಕನು ಅಧಿಕಾರಿ ನರೇಂದ್ರ ದೇವ್ ಅವರೊಂದಿಗೆ ವಾಗ್ವಾದ ನಡೆಸಿ ದಬಾಯಿಸುವುದು, ನಂತರ ಅವರನ್ನು ತಳ್ಳಲಾಗುತ್ತದೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುತ್ತಾರೆ.

ಪತ್ರ ವ್ಯವಹಾರವೊಂದು ಈ ಅಸಮಾಧಾನಕ್ಕೆ ಕಾರಣವಾಗಿದ್ದಲ್ಲದೇ, ನಾನು ಯಾರಿಗೂ ಹೆದರುವವನಲ್ಲ ಎಂದು ಶಿಕ್ಷಣಾಧಿಕಾರಿ ಸಭೆಯಲ್ಲಿ ಹೇಳಿದಾಗ ಶಾಸಕರು ತಾಳ್ಮೆ ಕಳೆದುಕೊಂಡರು, ಈ ಸಂದರ್ಭದಲ್ಲಿ ಅಧಿಕಾರಿ ಕೂಡ ಸಿಟ್ಟಿಗೆದ್ದಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...