alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸರ್ಕಾರದ ಲಾಂಛನ

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಉತ್ತರಾಖಂಡ್ ನ ಬಿಜೆಪಿ ಶಾಸಕ ಸರ್ಕಾರದ ಲಾಂಛನ ಬಳಸಿ ವಿವಾದಕ್ಕೀಡಾಗಿದ್ದಾರೆ. ಬಡವರ ಮನೆ ಯುವತಿಯೊಬ್ಬಳ ಮದುವೆಗೆ ಶಾಸಕ ಸುರೇಶ್ ರಾಥೋಡ್ ಸಹಾಯ ಮಾಡಿದ್ದಾರೆ.

ಅವಳ ಮದುವೆ ಆಹ್ವಾನ ಪತ್ರಿಕೆಯಲ್ಲಿ ಸರ್ಕಾರಿ ಲಾಂಛನವನ್ನು ಮುದ್ರಿಸಿದ್ದಾರೆ. ತಾನು ಮಾಡಿರೋ ಒಳ್ಳೆ ಕೆಲಸವನ್ನು ಮೆಚ್ಚಿಕೊಳ್ಳುವ ಬದಲು ಅನಾವಶ್ಯಕ ವಿಚಾರಕ್ಕೆ ವಿವಾದ ಮಾಡ್ತಿದ್ದಾರೆ ಅನ್ನೋದು ಶಾಸಕರ ಆರೋಪ.

ತಾವು ಸರ್ಕಾರದ ಭಾಗವಾಗಿರುವುದರಿಂದ ಆಮಂತ್ರಣ ಪತ್ರಿಕೆ ಮೇಲೆ ಲಾಂಛನ ಮುದ್ರಿಸಿರೋದಾಗಿ ತಿಳಿಸಿದ್ದಾರೆ. ಅದೇನೂ ದೊಡ್ಡ ಅಪರಾಧವಲ್ಲ ಅಂತಾನೂ ವಾದಿಸಿದ್ದಾರೆ.

ಸುರೇಶ್ ರಾಥೋಡ್ ಉತ್ತರಾಖಂಡ್ ನ ಜವಲ್ಪುರ ಕ್ಷೇತ್ರದ ಶಾಸಕರು. ಉತ್ತರಾಖಂಡ್ ನ ಲಾಂಛನದಲ್ಲಿ ಗಂಗಾನದಿಯ ಚಿತ್ರವಿದೆ. ಮಧ್ಯದಲ್ಲಿ ಸತ್ಯಮೇವ ಜಯತೇಯನ್ನು ಬಿಂಬಿಸುವ ಲಾಂಛನವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...