alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಕರಿಗೆ ಇರಿಸುಮುರಿಸು ತಂದೊಡ್ಡಿದೆ ಬಿಜೆಪಿ ಶಾಸಕನ ಈ ಹೇಳಿಕೆ

ಮುಂಬೈನ ಘಾಟ್ಕೋಪರ್ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ಕದಮ್ ಅವರ ವಿವಾದಾತ್ಮಕ ವಿಡಿಯೋ ಒಂದು ಈಗ ಮಹಾರಾಷ್ಟ್ರ ಬಿಜೆಪಿ ಘಟಕಕ್ಕೆ ಮಾತ್ರವಲ್ಲ, ದೇಶದ ಬಿಜೆಪಿಗೂ ಭಾರೀ ಇರಿಸುಮುರಿಸು ಉಂಟುಮಾಡಿದೆ.

ತಮ್ಮ ಪಕ್ಷದ ಬೆಂಬಲಿಗರೊಂದಿಗಿನ ಸಭೆಯಲ್ಲಿ ಮಾತನಾಡುವ ವಿಡಿಯೋ ಅಂತ ಹೇಳಲಾಗ್ತಿರೋ ದೃಶ್ಯದ ತುಣುಕೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವಿಡಿಯೋದಲ್ಲಿ ರಾಮ್ ಕದಮ್ ಯುವತಿಯರನ್ನ ಕಿಡ್ನ್ಯಾಪ್ ಮಾಡುವ ಬಗ್ಗೆ ಮಾತನಾಡಿದ್ದಾರೆ ಅಂತ ಹೇಳಲಾಗ್ತಿದೆ.

ನೀವು ನನ್ನ ಸಹಾಯ ಯಾವಾಗ ಬೇಕಾದ್ರು ಪಡೆಯಬಹುದು. ಯುವತಿಯೊಬ್ಬಳನ್ನು ನೀವು ಇಷ್ಟಪಟ್ಟು ಆಕೆಯನ್ನ ನಿಮ್ಮ ಪೋಷಕರು ಒಪ್ಪಿಕೊಂಡ ಪಕ್ಷದಲ್ಲಿ ಆ ಯುವತಿಯನ್ನ ಅಪಹರಿಸಿ ನಿಮ್ಮ ವಶಕ್ಕೆ ಒಪ್ಪಿಸಲು ನಾನು ಸಿದ್ದನಿದ್ದೇನೆ. ಹಾಗಾಗಿ ನನ್ನ ಮೊಬೈಲ್ ನಂಬರ್ ತೆಗೆದುಕೊಳ್ಳಿ ಅಂತ ರಾಮ್ ಕದಮ್ ವಿಡಿಯೋದಲ್ಲಿ ಹೇಳಿದ್ದಾರಂತೆ.

ಈ ವಿಡಿಯೋವನ್ನ ಎನ್ಸಿಪಿ ಪಕ್ಷದ ಶಾಸಕ ಜಿತೇಂದ್ರ ಔಹಾದ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಷೇರ್ ಮಾಡಿದ್ದಾರೆ. ಮಹಿಳೆ, ದೇಶವನ್ನಾಳುವವರ ಕೈನಲ್ಲಿ ಎಷ್ಟು ಸುರಕ್ಷಿತವಾಗಿದ್ದಾಳೋ ನೋಡಿ ಅಂತ ವ್ಯಂಗ್ಯವಾಡಿದ್ದಾರೆ. ರಾಮ್ ಕದಮ್ ಅವರ ಹೇಳಿಕೆಯನ್ನ ಅನೇಕ ರಾಜಕೀಯ ನಾಯಕರು ಖಂಡಿಸುತ್ತಿದ್ದಾರೆ.

ಹಾಗಿದ್ದರು ರಾಮ್ ಕದಮ್ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ನಾನು ಯುವಕನ ಪೋಷಕರಿಗೆ ಒಪ್ಪಿಗೆ ಇದ್ದ ಪಕ್ಷದಲ್ಲಿ ಮಾತ್ರ ಅಂತ ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಹೇಳಿಕೆಯನ್ನ ಅನವಶ್ಯಕವಾಗಿ ರಾಜಕೀಯ ವಿರೋಧಿಗಳು ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ ಅಂತ ರಾಮ್ ಕದಮ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...