alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಯಡವಟ್ಟು ಮಾಡಿದ ಮಹಾರಾಷ್ಟ್ರ ಬಿಜೆಪಿ ಶಾಸಕ

ಮೊನ್ನೆ ಮೊನ್ನೆಯಷ್ಟೇ ಯುವತಿಯರ ಕಿಡ್ನಾಪ್ ಹೇಳಿಕೆ ನೀಡಿ ಸಾಕಷ್ಟು ಟೀಕೆ ಟಿಪ್ಪಣಿಗಳಿಗೆ ಗುರಿಯಾಗಿದ್ದ ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ.

ಈ ಬಾರಿ ಅವರು ಮಾಡಿದಂತಾ ಯಡವಟ್ಟು ಕೆಲಸಕ್ಕೆ ತಕ್ಕ ಶಾಸ್ತಿಯೂ ಆಗಿದೆ. ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಮಾಡಿದಂತಾ ಟ್ವೀಟ್ ಅವರ ಬೇಜವಾಬ್ದಾರಿತನವನ್ನು ತೋರಿಸಿದೆ. ಅಮೆರಿಕದಲ್ಲಿ ಕ್ಯಾನ್ಸರ್ ಟ್ರೀಟ್ಮೆಂಟ್ ಪಡೆಯುತ್ತಿರುವ ನಟಿ ಸೋನಾಲಿ ಬೇಂದ್ರೆ ಮೃತರಾಗಿದ್ದಾರೆ. ಹಾಗಾಗಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಅಂತ ರಾಮ್ ಕದಮ್ ಟ್ವೀಟ್ ಮಾಡಿದ್ದರು.

ಸೋನಾಲಿ ಬೇಂದ್ರೆ ನಿನ್ನೆಯಷ್ಟೇ ಕೈನಲ್ಲಿ ಬುಕ್ ಹಿಡಿದು ನಸುನಗುತ್ತಿರುವಂತಾ ಫೋಟೋ ಟ್ವೀಟ್ ಮಾಡಿರುವ ಬೆನ್ನಲ್ಲೇ ರಾಮ್ ಕದಮ್ ಈ ಯಡವಟ್ಟು ಕೆಲಸವನ್ನು ಮಾಡಿದ್ದಾರೆ. ಇದರಿಂದ ಬಿಜೆಪಿ ಶಾಸಕರನ್ನು ಟ್ವಿಟ್ಟರ್ನಲ್ಲೇ ಸೋನಾಲಿ ಅಭಿಮಾನಿಗಳು ಮತ್ತು ಇತರರು ಸಖತ್ತಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ತೀವ್ರ ಮುಖಭಂಗಕ್ಕೆ ಒಳಗಾದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ ರಾಮ್ ಕದಮ್, ಸೊನಾಲಿ ಬೇಂದ್ರೆಯವರ ವಿಚಾರ ಒಂದು ಸುಳ್ಳು ಸುದ್ದಿ . ಅವರ ಆರೋಗ್ಯ ಸುಧಾರಿಸಲಿ ಅಂತ ನಾನು ಕಳೆದ ಎರಡು ದಿನಗಳಿಂದ ಪ್ರಾರ್ಥನೆ ಮಾಡ್ತಿದ್ದೀನಿ ಅಂತ ಕ್ಷಮೆ ಕೇಳದೆ ಸುಮ್ಮನಾಗಿದ್ದಾರೆ. ಆದ್ರೆ ನೆಟ್ಟಿಗರು ಅಷ್ಟು ಸುಲಭವಾಗಿ ರಾಮ್ ಕದಮ್ ಅವರನ್ನು ಬಿಡದೆ ಟ್ವೀಟ್ ನಲ್ಲೇ ಚಾಟಿ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...