alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕಿ ಪೂಜೆಯಿಂದ ಅಪವಿತ್ರವಾದ ಆಶ್ರಮಕ್ಕೆ ಗಂಗಾಜಲ ಹಾಕಿದ್ರು

ಉತ್ತರ ಪ್ರದೇಶದ ಹರ್ಮೀಪುರದ ಬಿಜೆಪಿ ಶಾಸಕಿಯೊಬ್ಬರ ಆಶ್ರಮ ಪ್ರವೇಶ ಚರ್ಚೆಗೆ ಕಾರಣವಾಗಿದೆ. ಶಾಸಕಿ ದೇವಸ್ಥಾನಕ್ಕೆ ಹೋಗಿ ಬಂದ ನಂತ್ರ ಆಶ್ರಮಕ್ಕೆ ಗಂಗಾಜಲ ಹಾಕಿ ಪವಿತ್ರಗೊಳಿಸಲಾಗಿದೆ. ವಿಕಾಸಗಂಡ್ ರಾಥ್ ನ ಮಿಸ್ಕ್ರಾ ಖುರ್ದ್ ಗ್ರಾಮದಲ್ಲಿ ದೂಮ್ರ ಋಷಿ ಆಶ್ರಮವಿದೆ. ಅಲ್ಲಿ ಮಹಿಳೆಯರ ಪ್ರವೇಶ ನಿಷಿದ್ಧ.

ಶಾಸಕಿ ಮನಿಷಾ ಅನುರಾಗಿ ಈ ಆಶ್ರಮ ಪ್ರವೇಶ ಮಾಡಿದ್ದಾರೆ. ಮನಿಷಾ ಆಶ್ರಮ ಪ್ರವೇಶ ಮಾಡ್ತಿದ್ದಂತೆ ದೇವಸ್ಥಾನದ ಅರ್ಚಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತ್ರ ಗಂಗಾಜಲ ಹಾಕಿದ್ದಾರೆ. ಮಹಾಭಾರತದಲ್ಲೂ ಇದ್ರ ಉಲ್ಲೇಖವಿದೆ. ಪಾಂಡವರು ಇಲ್ಲಿ ಬಂದು ನೆಲೆಸಿದ್ದರಂತೆ. ಪಾಂಡವರ ಪ್ರವೇಶದ ನಂತ್ರ ಆಶ್ರಮಕ್ಕೆ ಮಹಿಳೆಯರನ್ನು ನಿಷೇಧಿಸಲಾಗಿದೆಯಂತೆ.

ಜುಲೈ 12 ರಂದು ಮನಿಷಾ ಶಾಲೆ ಕಾರ್ಯಕ್ರಮವೊಂದಕ್ಕಾಗಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಆಶ್ರಮಕ್ಕೆ ಬಂದ ಮನಿಷಾ ಪೂಜೆ ಮಾಡಿದ್ದರು. ಘಟನೆ ನಂತ್ರ ಅರ್ಚಕರು ಋಷಿಗಳ ಮೂರ್ತಿಯನ್ನು ಸಂಗಮದಲ್ಲಿ ಸ್ನಾನ ಮಾಡಿಸಿ ಮತ್ತೆ ಸ್ಥಾಪನೆ ಮಾಡಿದ್ದಾರೆ. ಈ ಪದ್ಧತಿ ಬಗ್ಗೆ ನನಗೆ ತಿಳಿದಿರಲಿಲ್ಲ. ಐತಿಹಾಸಿಕ ಆಶ್ರಮ ಎನ್ನುವ ಕಾರಣಕ್ಕೆ ಬಂದು ಪೂಜೆ ಮಾಡಿದ್ದೆ ಎಂದು ಮನಿಷಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...