alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ಮಾಜಿ ಶಾಸಕರು ಪಾನಿಪೂರಿ ತಿನ್ನುವಾಗ ನಡೆದಿದ್ದೇನು?

bjp

ಬಿಜೆಪಿಯ ಮಾಜಿ ಶಾಸಕ ವಿಜಯ್ ಜೊಲ್ಲಿ ದರೋಡೆಕೋರರ ಟಾರ್ಗೆಟ್ ಆಗಿದ್ದಾರೆ. ದೆಹಲಿಯ ಲಾಡೋ ಸರಾಯ್ ನಲ್ಲಿ  ಮಾಜಿ ಶಾಸಕರು ಪಾನಿಪೂರಿ ತಿಂತಾ ಇದ್ರು. ಆ ಸಮಯದಲ್ಲೇ ಅವರ ಲ್ಯಾಪ್ ಟಾಪ್, ಕ್ಯಾಮರಾ ಮತ್ತು ಮಹತ್ವದ ದಾಖಲೆಗಳನ್ನು ಖದೀಮರು ಹೊತ್ತೊಯ್ದಿದ್ದಾರೆ.

ಮೋಟಾರ್ ಸೈಕಲ್ ನಲ್ಲಿ ಕಳ್ಳರು ಪರಾರಿಯಾಗಿದ್ದು, ಟ್ರಾಫಿಕ್ ಜಾಮ್ ಇದ್ದಿದ್ರಿಂದ ಬೆನ್ನಟ್ಟಿ ಹೋಗಲು ಸಾಧ್ಯವಾಗಿಲ್ಲ ಅಂತಾ ವಿಜಯ್ ಜೊಲ್ಲಿ ತಿಳಿಸಿದ್ದಾರೆ. ಸಾಕೇತ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದುವರೆಗೂ ಕಳ್ಳರು ಪತ್ತೆಯಾಗಿಲ್ಲ.

ತಮ್ಮ ಸ್ನೇಹಿತನ ಜೊತೆಗೆ ಮಾಜಿ ಶಾಸಕರು ಬಿಳಿ ಬಣ್ಣದ ಐ20 ಕಾರಿನಲ್ಲಿ ತೆರಳಿದ್ರು. ಸ್ನೇಹಿತರೊಬ್ಬರ ನಿವೃತ್ತಿ ಕಾರ್ಯಕ್ರಮಕ್ಕೆ ತೆರಳಬೇಕಿತ್ತು. ಲಾಡೋ ಸರಾಯ್ ಬಳಿ ಬರ್ತಿದ್ದಂತೆ ಅವರಿಗೆ ಪಾನಿಪೂರಿ ತಿನ್ನೋ ಆಸೆಯಾಗಿದೆ. ರಸ್ತೆ ಬದಿಯಲ್ಲಿ ಕಾರ್ ನಿಲ್ಲಿಸಿ ಚಾಟ್ ತಿನ್ನಲು ತೆರಳಿದ್ದಾರೆ.

ಸ್ವಲ್ಪ ಹೊತ್ತಿನಲ್ಲೇ ಕಾರಿನ ಹಿಂಭಾಗದ ಗಾಜು ಒಡೆದ ಕಳ್ಳರು ಲ್ಯಾಪ್ ಟಾಪ್, ಕ್ಯಾಮರಾ, ಕಾಂಬೋಡಿಯಾ ಟಿಕೆಟ್, ದಾಖಲೆಗಳನ್ನೆಲ್ಲ ಕದ್ದು ಎಸ್ಕೇಪ್ ಆಗಿದ್ದಾರೆ. ಕಳ್ಳರು ತಂದಿದ್ದ ಮೋಟಾರ್ ಬೈಕ್ ಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಮಾಜಿ ಶಾಸಕರೇ ಕಳ್ಳರ ಟಾರ್ಗೆಟ್ ಆದ್ರೆ, ಇನ್ನು ಜನಸಾಮಾನ್ಯರ ಪಾಡೇನು ಅಂತಾ ವಿಜಯ್ ಜೊಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...