alex Certify
ಕನ್ನಡ ದುನಿಯಾ       Mobile App
       

Kannada Duniya

‘ಶಕ್ತಿಮಾನ್’ ಕಾಲು ಮುರಿದಿದ್ದ ಬಿಜೆಪಿ ಶಾಸಕನ ಅರೆಸ್ಟ್

shaktiman-horse-after-surgery

ಡೆಹ್ರಾಡೂನ್: ಕಾಂಗ್ರೆಸ್ ನೇತೃತ್ವದ ಉತ್ತರಾಖಂಡ್ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಶಾಸಕ ಗಣೇಶ್ ಜೋಷಿ, ಪೊಲೀಸ್ ಕುದುರೆ ‘ಶಕ್ತಿಮಾನ್’ ಕಾಲು ಮುರಿದಿದ್ದಾರೆಂಬ ಆರೋಪದ ಮೇಲೆ ಪೊಲೀಸರು, ಗಣೇಶ್ ಜೋಷಿಯವರನ್ನು ಬಂಧಿಸಿದ್ದಾರೆ.

ಸೋಮವಾರದಂದು ಬಿಜೆಪಿ ಪ್ರತಿಭಟನೆ ವೇಳೆ ಈ ಘಟನೆ ನಡೆದಿದ್ದು, 14 ವರ್ಷದ ಪೊಲೀಸ್ ಕುದುರೆ ‘ಶಕ್ತಿಮಾನ್’ ಕಾಲಿಗೆ ವ್ಯಕ್ತಿಯೊಬ್ಬರು ಕೋಲಿನಿಂದ ಥಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಥಳಿತದಿಂದ ‘ಶಕ್ತಿಮಾನ್’ ಕಾಲು ಮುರಿದಿತ್ತು. ಈ ಸಂದರ್ಭದಲ್ಲಿ ಗಣೇಶ್ ಜೋಷಿಯವರ ಕೈನಲ್ಲೂ ಕೋಲು ಇದ್ದ ಕಾರಣ ಅವರೇ ಕುದುರೆಗೆ ಥಳಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

10 ಮಂದಿ ವೈದ್ಯರ ತಂಡ ‘ಶಕ್ತಿಮಾನ್’ ಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ‘ಶಕ್ತಿಮಾನ್’ ಗ್ಯಾಂಗ್ರೀನ್ ನಿಂದಾಗಿ ಸಾವನ್ನಪ್ಪಬಹುದೆಂಬ ಕಾರಣಕ್ಕೆ ಕಾಲು ಕತ್ತರಿಸಿ ಈಗ ಕೃತಕ ಕಾಲನ್ನು ಅಳವಡಿಸಲಾಗಿದೆ ಎನ್ನಲಾಗಿದೆ. ಬಂಧನಕ್ಕೊಳಗಾಗಿರುವ ಗಣೇಶ್ ಜೋಷಿ, ತಾವು ಕುದುರೆಯನ್ನು ಥಳಿಸಿಲ್ಲ. ಸರ್ಕಾರ ತಮ್ಮನ್ನು ರಾಜಕೀಯ ಕಾರಣಕ್ಕಾಗಿದೆ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...